ಹೊಸ ಬರಹಗಳು

ಪಾರಿಜಾತ...

ಕಳ್ಳಿಯಂತೆ... ಮಳ್ಳಿಯಂತೆ...
ಇರುಳಿನಲ್ಲೇ...ಅರಳುವೇ...
ಪರಿಮಳವನ್ನು ಪಸರಿಸುತ್ತಾ...
ನಮ್ಮ ಗಮನವ ಸೆಳೆಯುವೆ     |೧|

ಶುದ್ಧ ಮನಸಿಗೆ ಸಾಕ್ಷಿ ನೀನು
ನಿನ್ನ ಬಿಳುಪಿಗೆ ಸಾಟಿಯೇನು ?
ದೇವಲೋಕದ ಹೂವು ನೀನು
ನಿನ್ನ ಸೊಬಗಿಗೆ ಸೋತೆ ನಾನು  |೨|

ಒರಟು ನಿನ್ನಾ... ಎಲೆಗಳು...
ಅದೆಷ್ಟು ಮೆದು ನಿನ್ನಾ ದಳಗಳು...
ಬೆಳಕು ಮೂಡುವ ಮುನ್ನವೇ...
ಇರುವೆ ಧರೆಯ ಮಡಿಲೊಳು! |೩|

ಜಗಳವಾಡಿ ನಿನ್ನ ಪಡೆದ
ಸತ್ಯಭಾಮೆಗೆ ಪಾಠ ಕಲಿಸಿದೆ !
ಸ್ವಚ್ಚ ಪ್ರೀತಿಗೆ, ಶುದ್ಧ ಮನಸಿಗೆ
ಗೆಲುವು ಎಂದು ತಿಳಿಸಿದೆ...     |೪|

ಅರುಣಾ ಜಿ ಭಟ್

ಕಾಮೆಂಟ್‌ಗಳಿಲ್ಲ