ಈ ಪ್ರೀತಿ ಕೂಗು...
ಈ ಸಂಜೆ ಬಾನಿನಲಿ
ಕಡು ಕೆಂಪು ಕಿರಣದಲಿ
ಹಕ್ಕಿಗಳಿಗೆ ಗೂಡು ಸೇರುವ ತವಕ
ಚಂದಿರನಿಗೆ ಉದಯಿಸುವ ಪುಳಕ |೧|
ಜೋರಾಗಿ ಬೀಸಿ ಬಂದ ತಂಗಾಳಿಗೆ
ಹಗುರನೆ ಓಲಾಡಿತು ಗಿಡ-ಮರಗಳು
ಪಟ-ಪಟನೆ ಹಾರಿತು ತರಗೆಳೆಗಳು
ಅಂತೆಯೇ ನನ್ನ ಹಳೆ ನೆನಪುಗಳು ! |೨|
ಹಾಗೇ ತೇಲಿಬಂದ ಮೋಡಗಳು
ಮರೆ ಮಾಚಿದವು ಆ ಸುಂದರ ಚಂದಿರನ
ಈ ಮಬ್ಬು ಕತ್ತಲಲಿ ಕೆಟ್ಟ ಒಂಟಿತನವು
ಕೂಗಿ ಕರೆಯುತ್ತಿತ್ತು ನನ್ನೂಡತಿಯ ! |೩|
ಚಿಟ-ಪಟನೆ ಧರೆಗೆರಗಿತು ಮಳೆ ಹನಿಗಳು
ನೆನೆದು ಮಳೆಗೆ ಮಾಗಿದವು ಕಣ್ಣೀರ ಹನಿಗಳು
ಎಡೆ ಬಿಡದೆ ಸುರಿಯುತಿರುವ ಜಡಿ ಮಳೆಗೂ
ಕೇಳದಾಯಿತೆ ನನ್ನ ಈ ಪ್ರೀತಿ ಕೂಗು ! |೪|
ಜೊತೆಯಾಗಿ ಕಳೆಯಬೇಕೆಂದಿದ್ದೆ ಅದೆಷ್ಟೋ ವರುಷಗಳ
ಮನದಲ್ಲಿ ನೆನದು ಮರುಗುತಿರೆ ಪ್ರತಿ ನಿಮಿಷಗಳ
ಕತ್ತಲು ಕಳೆದು ಬೆಳಕೂ ಮೂಡಿತು, ಮನದಲ್ಲಿಯೂ
ನವ ಚೈತನ್ಯವ ನೀಡಿತು ಮತ್ತೆ ಈ ಎಳೆ ಬಿಸಿಲು... |೫|
ಸಚಿನ್ ಕೃಷ್ಣ ಭಟ್

ಕಾಮೆಂಟ್‌ಗಳಿಲ್ಲ