ಬಚ್ಚಿಟ್ಟ ಪ್ರೀತಿ ಕರಗಲಿ...
ಓ ಮಳೆ ಹನಿಯೇ...
ಕೊನೆಗೂ ನೀ ಬಂದಿರುವೆಯಾ !
ಜಗದ ಜನರ ಕಾಯಿಸಿ ನೋಯಿಸಿದೆ
ಈಗ ಮೊಗದ ತುಂಬಾ ಹುಸಿ ನಗೆಯಿದೆ.! |೧|
ಕೊನೆಗೂ ನೀ ಬಂದಿರುವೆಯಾ !
ಜಗದ ಜನರ ಕಾಯಿಸಿ ನೋಯಿಸಿದೆ
ಈಗ ಮೊಗದ ತುಂಬಾ ಹುಸಿ ನಗೆಯಿದೆ.! |೧|
ಸಂತಸದ ಕಣ್ಣೀರ ಹನಿಯೊ
ದುಃಖಕ್ಕೆ ನಿನ್ನ ಸಾಂತ್ವಾನವೋ
ನೀ ಇಳೆ ಸ್ಪರ್ಶಿಸಿದ ನಂತರ
ಸುಖ-ದುಃಖವೆಲ್ಲಾ ಸಮಾನಾಂತರ. |೨|
ದುಃಖಕ್ಕೆ ನಿನ್ನ ಸಾಂತ್ವಾನವೋ
ನೀ ಇಳೆ ಸ್ಪರ್ಶಿಸಿದ ನಂತರ
ಸುಖ-ದುಃಖವೆಲ್ಲಾ ಸಮಾನಾಂತರ. |೨|
ಚಿಟ-ಪಟನೆ ಬಿದ್ದ ಹನಿಗಳು
ಹಂಚಿನ ಅಂಚಿನಲಿ ನಿಂತಿದೆ...
ಮನೆಗೆ ಮುತ್ತು ಪೋಣಿಸಿದಂತಿದೆ
ನೋಡುಗರ ಮನಸೂರೆಗೊಳಿಸಿದೆ.! |೩|
ಹಂಚಿನ ಅಂಚಿನಲಿ ನಿಂತಿದೆ...
ಮನೆಗೆ ಮುತ್ತು ಪೋಣಿಸಿದಂತಿದೆ
ನೋಡುಗರ ಮನಸೂರೆಗೊಳಿಸಿದೆ.! |೩|
ಉರೆಲ್ಲಾ ತುಂಬಿದೆ ಕೆರೆ-ತೊರೆ
ಹರಿಯುತ್ತಿದೆ ನದಿ ಎಲ್ಲೆ ಮೀರಿ...
ಸುತ್ತಲೂ ಹೊಸದು ಕಂಗೊಳಿಸಿದೆ
ಪೃಕೃತಿ ಮಾತೆ ಹಸಿರು ಸೀರೆಯುಟ್ಟಾಗಿದೆ |೪|
ಹರಿಯುತ್ತಿದೆ ನದಿ ಎಲ್ಲೆ ಮೀರಿ...
ಸುತ್ತಲೂ ಹೊಸದು ಕಂಗೊಳಿಸಿದೆ
ಪೃಕೃತಿ ಮಾತೆ ಹಸಿರು ಸೀರೆಯುಟ್ಟಾಗಿದೆ |೪|
ಈ ಭುವಿಗೆ ಮಳೆಯ ಸ್ನೇಹ
ಕಾದ ಇಳೆಗೆ ನೀರಿನ ದಾಹ !
ಬರಡು ಭುವಿಗೆ ಚಿಗುರಿದೆ ಮೋಹ
ರೈತನಿಗೆ ಸುಗ್ಗಿ, ಕಣಜ ತುಂಬುವ ದಾಹ ! |೫|
ಕಾದ ಇಳೆಗೆ ನೀರಿನ ದಾಹ !
ಬರಡು ಭುವಿಗೆ ಚಿಗುರಿದೆ ಮೋಹ
ರೈತನಿಗೆ ಸುಗ್ಗಿ, ಕಣಜ ತುಂಬುವ ದಾಹ ! |೫|
ಮಳೆ ನೀರಿಗೆ ಹಕ್ಕಿ ಒದ್ದೆಯಾಗಿದೆ,ಆದರೂ
ಉಲಿಯುತಿದೆ ಇನ್ನೂ ಮಳೆಯಾಗಬೇಕಿದೆ
ಈ ಕಾಡು ಹಕ್ಕಿಗಿರುವ ಸಣ್ಣ ಕಾಳಜಿ
ನರ ಮನುಷ್ಯರಿಗೆ ಏಕೆ ಇಲ್ಲವಾಗಿದೆ ? |೬|
ಉಲಿಯುತಿದೆ ಇನ್ನೂ ಮಳೆಯಾಗಬೇಕಿದೆ
ಈ ಕಾಡು ಹಕ್ಕಿಗಿರುವ ಸಣ್ಣ ಕಾಳಜಿ
ನರ ಮನುಷ್ಯರಿಗೆ ಏಕೆ ಇಲ್ಲವಾಗಿದೆ ? |೬|
ಮನದಂಗಳದಿಯೂ ಮಳೆ ಸುರಿದಿದೆ
ಇನ್ನೆಷ್ಟು ಕಾಲ ನಾನು ಕಾಯ ಬೇಕಿದೆ ?
ಈ ಕವನದಿ ಅವಿತು ಕುಳಿತವಳಿಗೀಗ
ನೀರೋ-ಕಣ್ಣಿರೋ ಎಂದು ತಿಳಿಸಬೇಕಿದೆ |೭|
ಇನ್ನೆಷ್ಟು ಕಾಲ ನಾನು ಕಾಯ ಬೇಕಿದೆ ?
ಈ ಕವನದಿ ಅವಿತು ಕುಳಿತವಳಿಗೀಗ
ನೀರೋ-ಕಣ್ಣಿರೋ ಎಂದು ತಿಳಿಸಬೇಕಿದೆ |೭|
ಹೀಗೆಯೇ ಮಳೆ ಸುರಿದು ಎಷ್ಟು ಕಾಡುವೆ ?
ಮತ್ತೆ ಮಗದೊಮ್ಮೆ ಅವಳ ನೆನಪಿಸುವೆ !
ಆದರೂ ಎಡೆ ಬಿಡದೆ ಮಳೆ ಸುರಿಯಲಿ
ಅವಳ ಬಚ್ಚಿಟ್ಟ ಸವಿ ಪ್ರೀತಿ ಕರಗಲಿ.... |೮|
ಮತ್ತೆ ಮಗದೊಮ್ಮೆ ಅವಳ ನೆನಪಿಸುವೆ !
ಆದರೂ ಎಡೆ ಬಿಡದೆ ಮಳೆ ಸುರಿಯಲಿ
ಅವಳ ಬಚ್ಚಿಟ್ಟ ಸವಿ ಪ್ರೀತಿ ಕರಗಲಿ.... |೮|
ಸಚಿನ್ ಕೃಷ್ಣ ಭಟ್
ಕಾಮೆಂಟ್‌ಗಳಿಲ್ಲ