ಹೊಸ ಬರಹಗಳು

ಹೀಗೊಂದು ಕಥೆ

ಕತ್ತರಿ ಹಿಡಿದುಕೊಂಡು ತನ್ನ ಬಳಿ ಬರುತ್ತಿರುವ ಮನೆಯೊಡತಿಯನ್ನು ಕಂಡು ಗುಲಾಬಿ ಹೂವಿನ ಗಿಡ ಭಯದಿಂದ ನಡುಗುತ್ತಿತ್ತು. ಬಂದಾಕೆ 'ಕಚಕ್' ಎಂದು ಎರಡು ಹೂವುಗಳ ತೊಟ್ಟುಗಳನ್ನು ಕತ್ತರಿಸಿ ಹೂವುಗಳನ್ನು ತೆಗೆದುಕೊಂಡು ಒಳಗೆ ನಡೆದಳು. "ಅರಳಿದಾಕ್ಷಣವೇ ನನ್ನ ಕರುಳ ಕುಡಿ ದೂರವಾಯಿತಲ್ಲ" ಎಂದು ಗುಲಾಬಿ ಗಿಡ ಕಂಬನಿ ಮಿಡಿಯಿತು.
ಕಿಲ ಕಿಲ ನಗು, ಕಾಲ್ಗೆಜ್ಜೆಯ ಸದ್ದು ಕೇಳಿ ಮನೆಯತ್ತ ನೋಡಿತು ಗುಲಾಬಿ ಗಿಡ. ಶಾಲೆಗೆ ಹೊರಟು ನಿಂತ ಪುಟಾಣಿ ಮಗು. ತಲೆಯಲ್ಲಿ ಎರಡು ಪುಟ್ಟ ಜುಟ್ಟು. ಆ ಜುಟ್ಟಿನಲ್ಲಿ ಗುಲಾಬಿ ಹೂಗಳು. ಆಹಾ ! ನನ್ನ ಮಕ್ಕಳು ಅದೆಷ್ಟು ಮುದ್ದಾಗಿ ಕಾಣಿಸುತ್ತಿವೆ ! ಎಂದುಕೊಂಡ ಗುಲಾಬಿ ಗಿಡ ನೋವು ಮರೆಯಿತು. "ಅಮ್ಮಾ... ಟಾ... ಟಾ... ಎಂದು ಹೇಳುತ್ತಾ ಪುಟ್ಟ ಮಗು ಶಾಲೆಯ ಬಸ್ ಹತ್ತಿದಳು. ಟಾ... ಟಾ... ಹೇಳುವಂತೆ ಗುಲಾಬಿ ಗಿಡ ಮೆಲ್ಲಗೆ ಅಲುಗಾಡಿತು.

ಅರುಣಾ ಜಿ ಭಟ್

ಕಾಮೆಂಟ್‌ಗಳಿಲ್ಲ