ಹೊಸ ಬರಹಗಳು

ಸವಿ ಪ್ರೀತಿ...ತುಸು ನೆನಪು....

ಕವಿತೆಯಾಗಿದೆ ನಿನ್ನ...
"ಸವಿ"ಯಾದ ನೆನಪುಗಳು
ಮುದ ನೀಡಿ, ಮಾಯವಾದೆ
ಮತ್ತೆ ಬರುವೆಯಾ ಬಾಳಿಗೆ ! |೧|
ಸಕ್ಕರೆಯಲ್ಲಿ 'ಸವಿ'
ಅಸ್ತಿತ್ವ ಕಳೆದುಕೊಳ್ಳುವುದೇ !
ಜೇನು ಗೂಡಲ್ಲಿ ರಾಣಿ ಇಲ್ಲದೆ
ಸವಿ ಜೇನು ಸಿಗುವುದೇ !?   |೨|
ನಿನ್ನ ನೀಳ ಕೂದಲು, ನೀಲಿ ಬಿಂದಿಗೆ
ಆ ಕಪ್ಪು ಕಾಡಿಗೆ, ನೀಲಿ ಬಣ್ಣದ ಸೀರೆ
ಹುಣ್ಣಿಮೆ ರಾತ್ರಿಯಲ್ಲಿ ಕಂಗೊಳಿಸುವ
ಮುದ್ದು ಚಂದಿರನಿಗೆ ಮೋಡ ಸರಿದಂತೆ |೩|
ನನ್ನ ಕಾಡುವ ನಿನ್ನ ಆ ನೆನಪುಗಳು
ತಾಜಾ ಕಬ್ಬಿನ ಹಾಲು ಕುಡಿದಂತೆ
ಆದರೆ ನಿನ್ನ ಈ ಉದ್ದ ಮೂಗು
ಮಾತ್ರ ಕಾಯಿಸಿದ ಕಬ್ಬಿಣದಂತೆ. |೪|

ಸಚಿನ್ ಕೃಷ್ಣ ಭಟ್

ಕಾಮೆಂಟ್‌ಗಳಿಲ್ಲ