ಹು(ಹೆ)ಚ್ಚು ಪ್ರೀತಿ....
ಮತ್ತೆ ಮಗದೊಮ್ಮೆ ಕನಸಲ್ಲಿ ಬರುವುದೆನಗೆ
ನಿನ್ನ ಮುದ್ದು ಮೊಗದ ಮುಗುಳು ನಗೆ
ಅದನೆನೆದು ನನ್ನಷ್ಟಕ್ಕೇ ನಾನು ನಗುವೇ !
ಮಳೆ ಬಂದರೂ ಕೊಡೆ ಹಿಡಿಯದೆ ನಡೆವೆ
ಹಸಿವೆಯಾದರೂ ಮನದಲಿ ಬಡವ ನಾನು ?
ಬಾಯಾರಿದರೂ ಗೊಡವೆಯಿಲ್ಲದಾಗಿದೆ ಏನು !
ದೇಹ ದಣಿದರೂ ಮನಸು ದಣಿದಿಲ್ಲವೇನು !
ಮನಸು ದಣಿದರೂ ವಿಶ್ರಾಂತಿಯಿಲ್ಲವೇನು ?
ಇದು ಹುಚ್ಚು ಪ್ರೀತಿಯೋ ? ಹೆಚ್ಚು ಪ್ರೀತಿಯೋ... ?
ನಿನ್ನ ಮುದ್ದು ಮೊಗದ ಮುಗುಳು ನಗೆ
ಅದನೆನೆದು ನನ್ನಷ್ಟಕ್ಕೇ ನಾನು ನಗುವೇ !
ಮಳೆ ಬಂದರೂ ಕೊಡೆ ಹಿಡಿಯದೆ ನಡೆವೆ
ಹಸಿವೆಯಾದರೂ ಮನದಲಿ ಬಡವ ನಾನು ?
ಬಾಯಾರಿದರೂ ಗೊಡವೆಯಿಲ್ಲದಾಗಿದೆ ಏನು !
ದೇಹ ದಣಿದರೂ ಮನಸು ದಣಿದಿಲ್ಲವೇನು !
ಮನಸು ದಣಿದರೂ ವಿಶ್ರಾಂತಿಯಿಲ್ಲವೇನು ?
ಇದು ಹುಚ್ಚು ಪ್ರೀತಿಯೋ ? ಹೆಚ್ಚು ಪ್ರೀತಿಯೋ... ?
ಸಚಿನ್ ಕೃಷ್ಣ ಭಟ್
ಕಾಮೆಂಟ್‌ಗಳಿಲ್ಲ