ಹೊಸ ಬರಹಗಳು

ನಿನ್ನೊಲುಮೆಯ ಆರೈಕೆ

ಕಡಲ ಕಿನಾರೆಯ ಓ ಕನ್ಯೆ
ನಿನ್ನೆದೆಯ ಕಡಲ ಸೇರಲೇನು...
ನಿನ್ನೊಡಲ ಮೇಲೆ ಮಲಗಲೇನು...
ನನ್ನೆದೆ ಪ್ರೀತಿ ಹಣತೆ ಹಚ್ಚಲೇನು !      |೧|

ಕದಲದೆ ಕೂರುವೆ ಕಲ್ಲಿನಂತೆ
ಕದಡದೆ ಇರುವೆ ಮರಳಿನಂತೆ
ಜೊತೆಯಲಿರುವೆ ನೆರಳಿನಂತೆ
ಒಂದಾಗೋಣ ಬಾ ಹಾಲು-ಜೇನಿನಂತೆ |೨|

ಅಲೆಗಳಂತೆ ಅಪ್ಪಳಿಸುತಿರೆ ನಿನ್ನ 'ಸವಿ'ನೆನಪು
ನಾವಿಕನಿಲ್ಲದ ದೋಣಿಯಂತಾಗಿದೆ ಈ ಬದುಕು
ಒಮ್ಮೆ ನಿನ್ನ ಬೆಚ್ಚನೆ ತೋಳನು ಬಳಸಲೇನು...
ಬಿಗಿದಪ್ಪಿ ಬಿಕ್ಕಳಿಸಬೇಕು ಮತ್ತೆ ನಾನು |೩|

ಪ್ರೇಮ ರೋಗ ತಗಲಿದೆ ಈ ಹೃದಯಕೆ
ಸಂತೈಸು ಬೇಗ ಬಂದು ನನ್ನ ಸನಿಹಕೆ
ಸತಾಯಿಸಬೇಡ ಸವೆದ ಈ ಜೀವಕೆ
ನೀಡು ನಿನ್ನೊಲುಮೆಯ ತುಸು ಆರೈಕೆ    |೪|

ಸಚಿನ್ ಕೃಷ್ಣ ಭಟ್
ಬದಿಕೋಡಿ

ಕಾಮೆಂಟ್‌ಗಳಿಲ್ಲ