ಬಾಳಿನ ದೀಪಗಳು
ಉರುಳಿ ಹೋದವು
ಒಂದೊಂದು ದಿನಗಳು
ಕಾಲ ಚಕ್ರದಡಿಗೆ ಸಿಲುಕಿ
ಕಾಣದಾದವು
ನೆನಪನಷ್ಟೇ ಉಳಿಸಿದವು...!
ಒಂದೊಂದು ದಿನಗಳು
ಕಾಲ ಚಕ್ರದಡಿಗೆ ಸಿಲುಕಿ
ಕಾಣದಾದವು
ನೆನಪನಷ್ಟೇ ಉಳಿಸಿದವು...!
ಜೀವನದ ಈ ಏಕತಾನತೆಯ
ದೂರ ಸರಿಸಿ ಹೊಸತನ ತುಂಬಲು
ಬಂದಿದೆ ಈ ದೀಪಾವಳಿ
ಸಂಭ್ರಮದ ಬಳುವಳಿಯ ಹೊತ್ತು...!
ದೂರ ಸರಿಸಿ ಹೊಸತನ ತುಂಬಲು
ಬಂದಿದೆ ಈ ದೀಪಾವಳಿ
ಸಂಭ್ರಮದ ಬಳುವಳಿಯ ಹೊತ್ತು...!
ಬಾಳಿನ ಈ ಪಯಣದಲಿ
ಅದೆಷ್ಟು ದೀಪಗಳು !
ಮನೆ-ಮನದ ತುಂಬಾ
ಅವರದೇ ಪ್ರತಿ ರೂಪ
ಸುಡುವ ನೋವಿಗೆ ತಣ್ಣನೆಯ ಲೇಪ...!
ಅದೆಷ್ಟು ದೀಪಗಳು !
ಮನೆ-ಮನದ ತುಂಬಾ
ಅವರದೇ ಪ್ರತಿ ರೂಪ
ಸುಡುವ ನೋವಿಗೆ ತಣ್ಣನೆಯ ಲೇಪ...!
ಜೀವ ಕೊಟ್ಟು ಸಾಕಿ ಸಲಹಿದ
ಅಪ್ಪ - ಅಮ್ಮನೆಂಬ ಜೋಡಿದೀಪ
ಮಕ್ಕಳೆಂಬ ನಂದಾದೀಪ
ವಿದ್ಯೆ ಕಲಿಸಿದ ಗುರು ದೀಪ
ಬಾಳ ಬೆಳಗುವ ಗೆಳೆಯನೆಂಬ ದೀಪ
ಭಾವ ಹಂಚಿಕೊಳಲು ಸ್ನೇಹವೆಂಬ ದೀಪ..!
ಅಪ್ಪ - ಅಮ್ಮನೆಂಬ ಜೋಡಿದೀಪ
ಮಕ್ಕಳೆಂಬ ನಂದಾದೀಪ
ವಿದ್ಯೆ ಕಲಿಸಿದ ಗುರು ದೀಪ
ಬಾಳ ಬೆಳಗುವ ಗೆಳೆಯನೆಂಬ ದೀಪ
ಭಾವ ಹಂಚಿಕೊಳಲು ಸ್ನೇಹವೆಂಬ ದೀಪ..!
ಈ 'ದೀಪ' ಗಳೆಲ್ಲವೂ ಬೆಳಗುತಿರಬೇಕು
ಆರಿ ಹೋಗದಂತೆ ಸದಾ ಕಾಯಬೇಕು...
ಆಗ ಕಾಡದೆಂದೂ ಕತ್ತಲು...
ಬೆಳಕೆ ಇರುವುದು ಸುತ್ತಲೂ....
ಆರಿ ಹೋಗದಂತೆ ಸದಾ ಕಾಯಬೇಕು...
ಆಗ ಕಾಡದೆಂದೂ ಕತ್ತಲು...
ಬೆಳಕೆ ಇರುವುದು ಸುತ್ತಲೂ....
ಅರುಣಾ ಜಿ ಭಟ್
ಬದಿಕೋಡಿ
ಬದಿಕೋಡಿ
ಕಾಮೆಂಟ್ಗಳಿಲ್ಲ