ಒಪ್ಪಿಗೆ
ಎಲೆಯ ಮರೆಯಲಿ
ಮಧುರ ದನಿಯಲಿ
ಹಾಡುತಿರುವಾ ಕೋಗಿಲೆ
ನಿನ್ನ ಹಾಡನ್ನು ಕೇಳಿ ನಾನು
ಮನದ ನೋವನು ಮರೆಯಲೆ
ಮಧುರ ದನಿಯಲಿ
ಹಾಡುತಿರುವಾ ಕೋಗಿಲೆ
ನಿನ್ನ ಹಾಡನ್ನು ಕೇಳಿ ನಾನು
ಮನದ ನೋವನು ಮರೆಯಲೆ
ಯಾರ ಮನವು ನೋಯದಂತೆ
ಮಾತನಾಡುವ ಓ ಅರಗಿಣಿ
ನಿನ್ನ ಹಾಗೇ ಮಾತನಾಡಲು
ನಾನು ಕೂಡ ಶ್ರಮಿಸಲೇ...
ಮಾತನಾಡುವ ಓ ಅರಗಿಣಿ
ನಿನ್ನ ಹಾಗೇ ಮಾತನಾಡಲು
ನಾನು ಕೂಡ ಶ್ರಮಿಸಲೇ...
ಒಂದೇ ದಿನದ ಬಾಳ್ವೆಯಾದರು
ನಗುತಲಿರುವಾ ಹೂಗಳೇ
ನಿಮ್ಮಿಂದ ಮನೋಬಲವ ಪಡೆದು
ನಿಮ್ಮಂತೆಯೇ ನಾ ಬಾಳಲೇ
ನಗುತಲಿರುವಾ ಹೂಗಳೇ
ನಿಮ್ಮಿಂದ ಮನೋಬಲವ ಪಡೆದು
ನಿಮ್ಮಂತೆಯೇ ನಾ ಬಾಳಲೇ
ಕಲ್ಲು ಮುಳ್ಳಿನ ಹಾದಿಯಾದರೂ
ನಿಲ್ಲದೇ ಓಡುವ ನದಿಗಳೇ
ನಿಮ್ಮಿoದ ಪಾಠ ಕಲಿತು
ಬಾಳ ಪಯಣದಿ ಸಾಗಲೆ
ನಿಲ್ಲದೇ ಓಡುವ ನದಿಗಳೇ
ನಿಮ್ಮಿoದ ಪಾಠ ಕಲಿತು
ಬಾಳ ಪಯಣದಿ ಸಾಗಲೆ
ಅರುಣಾ ಜಿ ಭಟ್
ಬದಿಕೋಡಿ
ಬದಿಕೋಡಿ
ಕಾಮೆಂಟ್‌ಗಳಿಲ್ಲ