ಹೊಸ ಬರಹಗಳು

ಅಲೆದಾಡುವ ಜೀವನ

ಅಲೆಯೇ ಇಲ್ಲದ ಸಾಗರದಂತೆ,
ಬಲವೇ ಇಲ್ಲದೆ ಅಲೆದಾಡುವ ಜೀವನ,
ಜಯವಿಲ್ಲದೆ ನಿರ್ಜೀವವಾದ ಕನಸು,
ಭಯದಿಂದ ಸಜೀವ ಬೆಂದಿದೆ ಮನಸು...!

ಆಗಸದಷ್ಟು ಇದ್ದ ಆಸೆ
ಬೊಗಸೆಗೂ ಸಿಗದಂತಾಗಿದೆ,
ಕಮರಿ ಕರಗಿ ಹೋಗಿದೆ ಪ್ರೀತಿ,
ಮಳೆಯಂತೆ ಸುರಿದಿದೆ ಕಣ್ಣೀರು...!

ಜಡಿ ಮಳೆಗೆ ಹಕ್ಕಿ ಒದ್ದೆಯಾಗಿದೆ,
ಚುಮು ಚುಮು ಚಳಿಗೆ ನಡುಗುತಿದೆ,
ಬೆಚ್ಚನೆಯ ಹೊದಿಕೆ ಹಾಸುವವರಿಲ್ಲ
ಮುಚ್ಚಿಗೆಯ ಮನೆಯೂ ಇಲ್ಲ ...!
ತನ್ನ ಮೈಯ ತಾನೇ ಸವರಬೇಕಿದೆ,
ಇನ್ನೊಬ್ಬರ ಬರವು ಮರೆಯಬೇಕಿದೆ !

ಓ ಜಗವೇ ನೀನೇಕೆ ಇಷ್ಟು ಕ್ರೂರಿ ?
ಕ್ಷಮಿಸ ಬಾರದೆ ಒಂದು ಬಾರಿ...


ಸಚಿನ್ ಕೃಷ್ಣ ಭಟ್ 
ಬದಿಕೋಡಿ 

ಕಾಮೆಂಟ್‌ಗಳಿಲ್ಲ