ಹೊಸ ಬರಹಗಳು

ಜಗದ ಜನರು

ಹಾರುವ ಮನಸಿಗಿಂತ
ಸೋರುವ ಮನೆ ಲೇಸು...
ಕಾರುವ ಅಸೂಯೆಗಿಂತ
ಬೀರುವ ಕೆಂಗಣ್ಣು ಲೇಸು...!

ಕೊಂಕಾದ ನಾಲ್ಕು ಮಾತಿಗಿಂತ
ಸವಿಯಾದ ಎರಡು ನುಡಿ ಲೇಸು...
ಖಾಲಿಯ ಹೃದಯಕ್ಕಿಂತ...
ಖಯಾಲಿ ಕೈ ಲೇಸು... !

ಚಂಚಲವಾದ ಬುದ್ಧಿಗಿಂತ
ಅಚಲವಾದ ಗೋಡೆ ಲೇಸು...
ವಿಸ್ತಾರವಾದ ಜಾಗಕ್ಕಿಂತ
ವಿಶಾಲವಾದ ಮರದಡಿ ಲೇಸು..!

ತೋರಿಕೆಯ ಪ್ರೀತಿಯು,
ನೀರ ಮೇಲಿನ ಗುಳ್ಳೆಯಂತೆ...
ನಿಜವಾದ ಪ್ರೀತಿ , ಸ್ನೇಹ,
ನೀರೊಳಗಿನ ಕಲ್ಲಿನಂತೆ...!

ಕೆಲಸ ಆಗುವ ತನಕ 
ನಾವೇ ಅವರ ದೇವರು
ಕೆಲಸ ಮುಗಿದ ನಂತರ ನಾವು
ಒರೆಸಿ ಕುಡುಗಿದ ಬೆವರು...!

ಈ ಜಗದ ಜನರು ಏಕೆ ಹೀಗೆ ...!!!
ಇವರಿಗೆ ಬುದ್ದಿ ಬರುವುದಾದರೂ  ಹೇಗೆ ???

ಸಚಿನ್ ಕೃಷ್ಣ ಭಟ್ 
ಬದಿಕೋಡಿ 





ಕಾಮೆಂಟ್‌ಗಳಿಲ್ಲ