ಹೊಸ ಬರಹಗಳು

ಬಾವಿ

ಬಾವಿಯ ಹಗ್ಗದ ಉರುಳನ್ನು
ಬಿಂದಿಗೆಯ ಕೊರಳಿಗೆ ಬಿಗಿದು
ದೋಪ್ಪೆಂದು ಬಿಂದಿಗೆಯ ಬಾವಿಗಿಳಿಸಿದಾಗ,
ಬುಳು,ಬುಳುನೆ ನೀರು ತುಂಬಿ ಕೊಳ್ಳುವ ತವಕ ಬಿಂದಿಗೆಗೆ...
ಬಾಗಿ,ಬಾಗಿ ನೀರು ತುಂಬಿದ
ಬಿಂದಿಗೆಯನ್ನು ಎಳೆಯೂತಿರಲೂ
ರಾಟೆಯಿಂದ ಹೊರಡುತ್ತಿತ್ತು
ಒಂದು ಸುಂದರ ರಾಗ..
ಬಿಂದಿಗೆಯನು ಅಮ್ಮ ಬಾವಿಕಟ್ಟೆಯಲಿಟ್ಟು
ಮೆಲ್ಲ ಮೆಲ್ಲನೆ ಬಾಗಿಸುತಿರೆ
ಬೊಗಸೆಯೊಡ್ಡಿ ಸಿಹಿ ನೀರನು ಕುಡಿಯುತ್ತಿದ್ದರೆ
ದಾಹ ತೀರುವ ಆ ಪರಿಯ
ವಿವರಿಸುವುದು ಹೇಗೆ...?
ಈಗ ಅಂತರ್ಜಲ ಬತ್ತಿ ಹೋಗಿದೆ..
ಬಾವಿಗಳು ಬರಿದಾಗಿವೆ
ಪಾತಳದವರೆಗೂ ಇಳಿದು
ನೀರು ಹುಡುಕುತಿವೆ ಕೊಳವೆ ಬಾವಿಯ
ಯಂತ್ರಗಳು..ಮುಂದೊಂದು ದಿನ
ನೀರಿಲ್ಲದೆ..ನರಳುವ ಸ್ತಿತಿ ಬಾರದಿರಲಿ

ಅರುಣಾ.ಜಿ.ಭಟ್
ಬದಿಕೋಡಿ

ಕಾಮೆಂಟ್‌ಗಳಿಲ್ಲ