ನನ್ನ ಅಮ್ಮ...
ತಾನು ಸದಾ ಕಷ್ಟದಲ್ಲಿ
ಬಳಲಿ ಬೆಂದರೂ...
ತನ್ನ ಮಕ್ಕಳ ಮುದ್ದಿಸಿ
ಬೆಳೆಸಿದವಳು ನನ್ನ ಅಮ್ಮ !
ಚಳಿ-ಸೆಕೆ ಲೆಕ್ಕಿಸದೆ
ನಮ್ಮ ಆರೈಸುತ್ತಿದ್ದಳಾಕೆ,
ಅಪ್ಪನಿಗೆ ನೆರಳಿನಂತೆ
ನೆಮ್ಮದಿ ನೀಡಿದಾಕೆ ನನ್ನ ಅಮ್ಮ...
ಮುಂಜಾನೆ ಬೇಗ ಎದ್ದು
ಬಗೆ ಬಗೆ ತಿಂಡಿ ಮಾಡಿ,
ಸಂಜೆ ರಾತ್ರಿ ಲೆಕ್ಕಿಸದೆ
ತುತ್ತು ಕೊಟ್ಟಳು ನನ್ನ ಅಮ್ಮ...
ದಿನವೂ ಪುಸ್ತಕ ಓದಿ
ಅಕ್ಷರದಿಂದ ಅರಿವು ಮೂಡಿಸಿ
ನನಗೆ ಪ್ರೀತಿ ಕೊಟ್ಟು, ನಮ್ಮ
ಬದುಕು ರೂಪಿಸಿದಾಕೆ ನನ್ನ ಅಮ್ಮ...
ನೆಂಟರು ಹೋಕರು ಬಂದು
ನನ್ನನ್ನು ಹೀಯಾಳಿಸಿದಾಗ
ಅವರಿಗೆಲ್ಲ ಎದುರು ನಿಂತು
ನನ್ನ ಬೆನ್ನಿಗೆ ನಿಂತವಳು ನನ್ನ ಅಮ್ಮ...
ನಿನ್ನ ಅರೋಗ್ಯ ಹದಗೆಟ್ಟು, ನಮ್ಮ
ಆರೈಕೆಯಲ್ಲಿ ನೀ ಮಗುವಾದಾಗ
ನೀ ಕೊಟ್ಟ ಪ್ರೀತಿಯ ಅನುಭವ,ದೇವಾ!
ಮತ್ತೆ ಕೊಡದಿರು ಅಮ್ಮನಿಗೆ ಈ ಕಷ್ಟವ....
ಸಚಿನ್ ಕೃಷ್ಣ ಭಟ್
ಕಾಮೆಂಟ್ಗಳಿಲ್ಲ