ಹೊಸ ಬರಹಗಳು

ಮುದ್ದು ಮೊಗದ ಚೆಲುವೆ

ಅದೇಕೋ ನಿನ್ನ ನೋಡಿದ ಕ್ಷಣದಲಿ
ಗೊತ್ತಿಲ್ಲ ಏಕೋ ಖುಷಿಯು ಮನದಲಿ
ಏನೋ ಹೇಳುವ ತವಕ ಹಂಬಲದಲಿ
ಏನೂ ಹೇಳದಿರುವೆ ಮರುಕ್ಷಣದಲಿ !

ಸನಿಹಕೆ ಬಂದು ಪಿಸುಗುಡಲಾ ಇಲ್ಲಾ
ದೂರದಿ ನಿಂದು ಕಣ್ಣಲೇ ಮಾತಾಡಲ
ಕಣ್ ಮುಚ್ಚದೆ ಕಾಣಲು ಏನೋ ಕಾತುರ
ಬಳಿ ಬಂದು ಮಾತಡಲು ಬಲು ಆತುರ !

ಮುಂಜಾನೆ ಬೀಸುವ ಆ ತಂಗಾಳಿಗೆ,
ಚುಮುಗುಡುವ ಚಳಿಗೆ ಬೆಚ್ಚಗಿನ ಕಾಫಿ
ಅಂತೆ ಬರಿದಾದ ಏಕಾಂಗಿ ಈ ಬಾಳಿಗೆ
ಬೆಚ್ಚನೆಯ ಪ್ರೀತಿಯ ಹೊದಿಕೆಯಾಗು !

ಅದೆಷ್ಟು ಮುಗ್ದ ನಗು ನಿನ ಮೊಗದಲಿ
ಕನಸ ಕಂಡಿರುವೆ ನೀ ಬಂದಂತೆ ಬದುಕಲಿ
ನಿರಾಸೆಗೊಳಿಸದೆ ಬರುವೆಯ ಜೊತೆಯಲಿ
ನಾನಿರುವೆ ಕೊನೆ ತನಕ ಉಸಿರಿನ ಉಸಿರಲಿ !

ಸಚಿನ್ ಭಟ್

1 ಕಾಮೆಂಟ್‌: