ಹೊಸ ಬರಹಗಳು

ಹಬ್ಬ

ತಿಳಿ ನೀಲಿ ಅಂಗಿ, ಕಡು ನೀಲಿ ಚಡ್ಡಿ ಹಾಕಿ ಬಲಗಡೆ ಕುರ್ಚಿಯಲ್ಲಿ ಸಂಕೋಚದಿಂದ ಕುಳಿತಿದ್ದ ಹುಡುಗ, "ಹೊರಡೋಣ ಪುಟ್ಟಾ..?" ಎಂದಾಗ, ಮೆಲ್ಲನೆ ಎದ್ದು ಮಮತೆಯಿಂದ ಕರೆಯುತ್ತಿದ್ದ 'ಹೊಸ ಅಮ್ಮನ' ಕೈ ಹಿಡಿದು ಹೊರಡಲು ಅನುವಾದ.

ಶ್ವೇತ ವಸ್ತ್ರದಾರಿ ಪಾದ್ರಿ, ಹೊರ ಬಾಗಿಲಿನ ತನಕ ಬಂದು, ಬೀಳ್ಕೊಟ್ಟರು ಆ ಹೊಸ ಕುಟುಂಬವನ್ನು - ಪುಟ್ಟ ಹೊಸ ಹೊಸ ಸದಸ್ಯನನ್ನೂ ಸೇರಿಸಿ!

ದಂಪತಿಗಳ ಆ ಹಳೇ ಕಾರು, ಆಶ್ರಮದ ಅಂಗಳದಿಂದ ಹೊರಟು, ಪ್ರವೇಶದ್ವಾರ ದಾಟಿ, ಮುಖ್ಯರಸ್ತೆಯಲ್ಲಿ ಮಾಯವಾಗುವವರೆಗೆ ಕೈ ಬೀಸುತ್ತ ನಿಂತಿತ್ತು ಅವನ ಇದುವರೆಗಿನ ಗೆಳೆಯರ ಗುಂಪು.

ಹೆಚ್ಚೇನೂ ಅರ್ಥವಾಗದಿದ್ದರೂ, ತನ್ನದು ಎನ್ನುವ ಮನೆ ಸೇರುತ್ತಿದ್ದೇನೆ... ನನ್ನನ್ನೂ ಪ್ರೀತಿಸಲು ಅಪ್ಪ-ಅಮ್ಮ ಸಿಕ್ಕಿದರು ಎಂದು ಯೋಚಿಸುತ್ತಾ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆ ಪುಟ್ಟ ಮಗುವಿಗೆ ಅದೇ ದಿನ ಬಹುಶ ನಿಜವಾದ ಹುಟ್ಟು ಹಬ್ಬ, ಸ್ವಾತಂತ್ರ್ಯ ದಿನ! ಹಾಗೆಯೇ, ಪ್ರೀತಿ ಹಂಚಲು, ಮಮತೆ ತೋರಲು, ಈ ಮಗುವನ್ನು ಪಡೆದಿರುವುದೇ ಆ ದಂಪತಿಗೆ ದೊಡ್ಡ ಹಬ್ಬ!!

ಕಾಮೆಂಟ್‌ಗಳಿಲ್ಲ