" ಕೇದಿಗೆ " ಹೂವು
" ಕೇದಿಗೆ " ಹೂವು.ಹಳದಿ ಬಣ್ಣದ ಎಲೆ..ಆದರೂ ಒಂದು ಕಾಲದಲ್ಲಿ ಅದಕ್ಕಿದ್ದ ಬೆಲೆ..ಭಲೇ..ಭಲೇ.ಬಲು ಪರಿಮಳ.ಅತಿಯಾದ ಪರಿಮಳ ಆಗದೆ ಇದ್ದವರು ಕೆಲವರು " ಘಾಟು" ಎಂದು ಹೇಳುತ್ತ ಒಂದೆರಡು ಸಲ ಪರಿಮಳ ಆಸ್ವಾದಿಸಿ ಮೂಲೆಯಲ್ಲಿ ಇಡುತ್ತಿದ್ದುದೂ ಉಂಟು.!
ಕೇದಿಗೆಯ ಆ " ಗೊಂಚಲು" ಚಂದವೋ ಚಂದ.ಮನೆಯಲ್ಲಿ ಎಷ್ಟು ಮಕ್ಕಳಿದ್ದರೂ ಹಂಚಲು ಬರುತಿತ್ತು.ತುದಿ ತಲುಪಿದ ಹಾಗೇ ಪುಟ್ಟ,ಪುಟ್ಟ ಕೇದಿಗೆ.ಆ ಪುಟ್ಟದೇ ಹೆಚ್ಚು ಇಷ್ಟ.
ಈ ಹೂವನ್ನು ಮುಡಿಯಲು ಒಂದು ಗಿಡದ " ಮುಳ್ಳು" ಹೆಚ್ಚಿನವರೂ ಬಳಸುತ್ತಿದ್ದರು.ಕೇದಿಗೆಯನ್ನು ಉಲ್ಟಾ ಮಡಿಚಿ ..ಆ ಮುಳ್ಳನ್ನು ತಲೆಗೂ ಚುಚ್ಚದ ಹಾಗೇ,ಕೇದಿಗೆಯು ತುಂಬಾ ಹಾಳಗದ ಹಾಗೆ,ಮುಡಿಯುವುದು ಒಂದು ಜಾಣತನ.!!!
ಹಾಗೆ ಮುಡಿದಾಗ ಮುಖಕ್ಕಿಂತ ಮೊದಲು "ತಲೆಯ " ಮೇಲೆ ಈ " ಕೇದಿಗೆ" ಹೂವಿನ ತುದಿ ಕಾಣಿಸುತಿತ್ತು.ಆದರೇನು? ಅದುವೇ ಒಂದು ಚಂದ." ವಿಶ್ವ ಸುಂದರಿಯ," " ಕಿರೀಟ".
ಈಗ ಈ ಕೇದಿಗೆಯನ್ನು ಹಾಗೇ ಮುಡಿದು ಕೊಂಡು ಹೋದರೆ ಹೇಗಿರ ಬಹುದು? ಮುಡಿದವಳನ್ನು ನೋಡಿ " ಮುಸಿ,ಮುಸಿ" ನಗಬಹುದು.
ಕೆಲವರು ಗೊಂಚಲಿನಲ್ಲಿರುವ ಹೂವನ್ನು ತೆಗೆದು ಉಳಿದ ಭಾಗವನ್ನು ಬಟ್ಟೆ ತುಂಬಿಸುವ ಪೆಟ್ಟಿಗೆಯ ಒಳಗೆ ಇಡುತ್ತಿದ್ದರು.ಜಿರಳೆ ಬಾರದ ಹಾಗೆ.ಆಗ ಈಗಿನಂತೆ ಜಿರಲೆಗಳನ್ನು ಕ್ಷಣ ಮಾತ್ರದಲ್ಲಿ ಕೊಲ್ಲುವ ವಿಷಗಳು ಇರಲಿಲ್ಲ.ಈಗ ಕಂಡಾಕ್ಷಣ ಕೊಂದು ಎಸೆಯ ಬಹುದು.ಜೊತೆಗೆ ಆ ವಿಷದ ಘಾಟಿಗೆ ಕೊಂದವರಿಗೆ ನಾಲ್ಕೈದು " ಆ ಕ್ಷಿ." !?
ನಿನ್ನೆ ಹೀಗೆ ಮೊಬೈಲ್ನಲ್ಲಿ ಈ ಕೇದಿಗೆ ಚಿತ್ರ ಎಲ್ಲಿಂದಲೋ ಪ್ರತ್ಯಕ್ಷವಾಯಿತು.ಅಲ್ಲ ಯಾರೋ ಕಳಿಸಿದ್ದು.ಆಗ ಈ ಕೇದಿಗೆ ಕಥೆ ನೆನಪಾಗಿ...ಲಹರಿಯಲ್ಲೂ ಪರಿಮಳ ಹರಡಲು ಮನ ಬಯಸಿತು.
ಹೇಗಿದೆ? ಪರಿಮಳವಾ? ಘಾಟ ?

ಅರುಣಾ.ಜಿ.ಭಟ್
ಕಾಮೆಂಟ್ಗಳಿಲ್ಲ