ಹೊಸ ಬರಹಗಳು

ಪ್ರೇಮ ನಿವೇದನೆ

ನಿನ ಸವಿ ನೆನಪು ಬರಿಯ ಕನಸು
ಮನಸಾರ ಪ್ರೀತಿಸಿ ಆಗಿಸು ನನಸು
ದಿನೇ ದಿನೇ ಅದೇಕೆ ನೆನಪಲಿ ಬರುವೆ
ಸುಮನಿದ್ದ ನನ್ನ ಮನವನೇಕೆ ಕಾಡುವೆ !
ಮುಂಜಾನೆಯ ಆ ಮಂಜಿನ ಬಣ್ಣ
ಆಕಾಶ ಬಣ್ಣದ ಕಡು ನೀಲಿ ಕಣ್ಣ
ನೋಡಿ ಹೇಗೆ ಸುಮ್ಮನಿರಲಿ ಇನ್ನ
ಹೇಳಲೇ ಪ್ರೇಮ ನಿವೇದನೆಯನ್ನ  ?
ನೀನಿರಲು ನಾ ನಗುವ ಚಿಲುಮೆ
ತುಸು ತೋರಿಸು ನಿನ್ನ ಒಲುಮೆ
ಬಾಡಲು ಬಿಡದಿರು ಹಾಗೆ ಸುಮ್ಮನೆ
ಪ್ರೀತಿಯಿಂದ ಆರೈಸು ಇದೇ ತರನೆ !
ನಿನ್ನ ಬಳಿ ಹೇಳಲು ನನಗೇನೋ ಭಯ
ನಿಜ ನೀಡುವೆ ನನ್ನೊಲುಮೆಯ ಅಭಯ
ಅದೇನು ಮೋಡಿ ಮಾಡಿದೆ ನೀ ಮಾಯ
ನಿನ ನೆನೆದರೆ ಪ್ರತೀ ಕ್ಷಣ-ಕ್ಷಣವೂ ಜಯ
ಸಚಿನ್ ಕೃಷ್ಣ ಭಟ್
ಬದಿಕೋಡಿ

ಕಾಮೆಂಟ್‌ಗಳಿಲ್ಲ