ಕಾಡುವ ಮೋಹಿನಿ
ನನ್ನ ನೆನಪಿನ ಬುತ್ತಿಯ ಮುಚ್ಚಳ ಮತ್ತೊಮ್ಮೆ ತೆಗೆಯುತಿರುವೆ.ಘಟನೆ ಒಂದನು ಬರೆಯುತಿರುವೆ.ಓದುವಿರೋ...ಸುಮ್ಮನೆ ನೋಡಿ..ಇವಳ ಹಳೆ ಪುರಾಣ ಇದ್ದದ್ದೇ..ಎಂದು ಮನದಲ್ಲೇ ಬೈಯ್ದುಕೊಳ್ಳುತ್ತಿರೋ...ನಾನರಿಯೆ.
ನಾನಾಗ ಒಂಭತ್ತನೇ ತರಗತಿಯಲಿದ್ದೇ.ಶಾಲಾ ವಾರ್ಷಿಕೋತ್ಸವದ ದಿನ ನಿಗದಿಯಾಗಿದ್ದ ಸಡಗರದ ಸಮಯ.ನಮ್ಮ ಕನ್ನಡ ಪಂಡಿತರಾದ ಶಂಕರ ನಾರಾಯಣ ಭಟ್ ರವರು ಹುಡುಗಿಯರಿಂದ ..ರುಕ್ಮಾoಗದ ಚರಿತ್ರ್ರೆ..ನಾಟಕ ಮಾಡಿಸುವ ಜವಾಬ್ದಾರಿ ಹೊತ್ತಿದ್ದರು.ನನಗೆ ಮೋಹಿನಿಯ ಪಾತ್ರ ಕೊಟ್ಟಿದ್ದರು.ಆಟದ ಸಮಯದಲ್ಲಿ ನಾಟಕದ ಅಭ್ಯಾಸ ಮಾಡಲು ಹುಡುಗಿಯರ ಕೋಣೆಯಿತ್ತು.ಎಲ್ಲರ ಪಾತ್ರ ವಿವರಿಸಿ ..ಹೇಗೆ ನಟಿಸಬೇಕೆಂದು ಅವರು ಹೇಳಿ ಕೊಡುತ್ತಿದ್ದರು.
ನಾನು ಅರ್ಥಾತ್ ಮೋಹಿನಿ ಹಾಡು ಹಾಡುತ್ತಾ ನಾಟ್ಯವಾಡುತ್ತ ಇರುವಾಗ ಕಾಡಿಗೆ ರುಕ್ಮಾoಗದನ ಆಗಮನ.ಮೋಹಿನಿಯ ರೂಪಕೆ ಮರುಳಾಗಿ ಆಕೆಯನ್ನು ಹೊಗಳುತ್ತಾನೆ.ಆಗ ಮೋಹಿನಿ ತೋರು ಬೆರಳು ಗಲ್ಲಕ್ಕಿಟ್ಟು,ತಲೆ ತಗ್ಗಿಸಿ ನಾಚುತ್ತ ಕಾಲ ಹೆಬ್ಬೆರಳಿಂದ ನೆಲವನ್ನು ಗೀರಬೇಕಿತ್ತು.ಅಧ್ಯಾಪಕರು ಹೇಳಿದಂತೆ ಮಾಡುತ್ತಿದ್ದೆ.ಆಗ ಕಿಟಕಿಯ ಸಂದಿನಿಂದ ಹಾಹಾ...ಹ್ಹ ಹ್ಹ ಅಂತ ನಗುವ ಸದ್ದು.ನನ್ನ ತರಗತಿಯ ಕೆಲವು ಹುಡುಗರು ಇಣುಕಿ ನೋಡುತ್ತಿದ್ದರು.ಅಧ್ಯಾಪಕರು ಜೋರಾಗಿ ಬೈದು ಕಳಿಸಿದ್ದರು.
ಅಭ್ಯಾಸ ಮುಗಿಸಿ ಬಂದೆ.ಇಣುಕಿದ್ದ ಅದೇ ಹುಡುಗರು...ನಾನು ನಟಿಸಿದ ಹಾಗೆ ನಟಿಸುತ್ತಾ ...ಜೋರಾಗಿ ನಕ್ಕರು.ನಾಚಿಕೆ.ಕೋಪ..ಅವಮಾನದಿಂದ ಅಳುವೆ ಬಂತು.
ಮರು ದಿನ ಮತ್ತೆ ಅಭ್ಯಾಸ.ನಾನು ಆ ರೀತಿ ನಟಿಸಲು ಒಪ್ಪಲೇ ಇಲ್ಲ.ಸಾರ್..ನಾನು ಸ್ಟೇಜ್ ಮೇಲೆ ಹಾಗೆಯೇ ಮಾಡುವೆ..ಅಂತ ಗೋಗರೆದೆ.ನೋಡು..ಎರಡೂವರೆ ಪುಟದಷ್ಟು ಸಂಭಾಷಣೆ ಇದೆ.ನೀನು ಬಾಯಿ ಪಾಠ ಮಾಡಿ ನೆನಪಿಟ್ಟು ಕೊಳ್ಳುವದರಲ್ಲಿ ಜಾಣೆ.ಹಾಗೆ ನಟನೆಯು ಮುಖ್ಯ ..ಎಂದರು ಅಧ್ಯಾಪಕರು.
ಆ ದಿನವೂ ಬಂತು.ಚಂದವಾಗಿ ಅಲಂಕಾರ ಮಾಡಿದ್ರು..ಮೋಹಿನಿಯ ಹಾಗೆ ಕಾಣುತ್ತಿದ್ದಿಯ.ಯಾರನ್ನು ಮರುಳು ಮಾಡ ಬೇಡ ..ಎಂದರು ಮೇಕಪ್ ಮಾಡಿದವರು.ಆಯಿತು ಎಂದೆ..
ಯೇ..ಅರುಣಾ ಎಷ್ಟು ಚಂದ ..ಎರಡು ಕಿರೀಟ.ತಲೆ ತುಂಬಾ ಹೂವು..ಅಂತ ಗೆಳತಿಯರು ಹೇಳುವಾಗ..ನನ್ನ ಮೋಹಿನಿ ಅವತಾರವನ್ನು ನೋಡುವಾಸೆ.ಏನು ಮಾಡಲಿ.ಕನ್ನಡಿಯು ಇಲ್ಲ.ಈಗಿನಂತೆ ಮೊಬೈಲ್ ಇದ್ರೆ ಒಂದು ಸೆಲ್ಫಿ ತೆಗಿಯ ಬಹುದಿತ್ತು.
ನನ್ನ ಪ್ರವೇಶದ ಕ್ಷಣ.ಯಾವುದರಲ್ಲೂ ಭಾಗವಹಿಸದ ಕೆಲವು ಹುಡುಗರು..ಬಣ್ಣ.ಬಣ್ಣದ ದೊಡ್ಡ ದೊಡ್ದ ಹೂ ತುಂಬಿದ ಗೆಲ್ಲುಗಳನ್ನು ಮೆಲ್ಲಗೆ ಅಲುಗಾಡಿಸುತ್ತ ಪರದೆಯ ಮರೆಯಲ್ಲಿ ಕುಳಿತಿದ್ದರು.ಬಣ್ಣದ ಬೆಳಕು.ಕಾಡಿನ ವಾತಾವರಣವೇ ಸ್ಟೇಜ್ ಮೇಲೆ ಸೃಷ್ಟಿ ಮಾಡಿದ್ದರು ನಮ್ಮ ಪಿ.ಟಿ ಮಾಸ್ಟ್ರು.
ಹಾಡು ಆರಂಭವಾದಾಗ ಹೋದೆ.ಮುಗಿವಾಗ ರುಕ್ಮಾoಗದನ ಆಗಮನ..ಆ ದೃಶ್ಯದಲ್ಲಿ ಹೇಗೆ ನಟಿಸುವುದಪ್ಪಾ...ಅನ್ನುವ ನಾಚಿಕೆ ಒಂದು ತಿಂಗಳಿನಿಂದ ಕಾಡಿತ್ತು.ನಿಜವಾಗಿಯೂ ನಾಚಿಕೆ ಆಯಿತು.ಧೈರ್ಯದಿಂದ ನಟಿಸಿದೆ.ಶಿಳ್ಳೆ..ಚಪ್ಪಾಳೇಗಳ ಸದ್ದು ಕೇಳಿ ಬಂತು.
ಅಲ್ಲಿಂದ ಬಂದಾಗ ಎಲ್ಲರೂ ಹೊಗಳಿದ್ದೆ..ಹೊಗಳಿದ್ದು.ಎಲ್ಲಾ ಗುರುಗಳಿಗೂ ಸಂತೋಷ.ಆದರೆ ಆ ದಿನ ಫೋಟೋ ತೆಗೆಯಲು ಬರುತ್ತೇನೆ ಎಂದಿದ್ದವರು ಬರಲೇ ಇಲ್ಲ.ಎಲ್ಲಿಯೋ ಮದುವೆಯ ಫೋಟೋ ತೆಗೆಯಲು ಹೋಗಬೇಕಾದ ಅನಿವಾರ್ಯತೆಯಂತೆ.
ನನ್ನ ರೂಪವನ್ನು ನೋಡುವಾಸೆ ಹಾಗೆಯೇ ಉಳಿಯಿತು.ಆ ಆಭರಣ..ಜಡೆ ತುಂಬಾ ಹೂವು..ಚೆ..ಹೇಗಿ ಕಾಣಿಸಿದೆನೋ...
ಇಂದಿಗೂ ಆ ಮೋಹಿನಿ ಕಾಡುತ್ತಲೇ ಇದ್ದಾಳೆ.
ನಿಮಗೂ ನನ್ನ ನೆನಪಿನ ಕಾಟ..ಬೇಸರವಾದರೆ ಕ್ಷಮಿಸಿ.
ಬಿ.ಅರುಣಾ.ಜಿ.ಭಟ್

ಕಾಮೆಂಟ್ಗಳಿಲ್ಲ