"ಕಟ್ಟದ ಮೀನುಗಳು "ಮತ್ತು "ಸುಕ್ರುಂಡೆ.."
ಶೀರ್ಷಿಕೆ ಓದುವಾಗ ಇದೇನಪ್ಪಾ...ಅಂತ ಅನಿಸುತ್ತಿದೆಯೇ? ಯೋಚಿಸ ಬೇಡಿ.ಈ "ಸುಕ್ರುಂಡೆ "ಯ ಪುರಾಣ ಸಣ್ಣದಾಗಿ ವಿವರಿಸುತ್ತೇನೆ..
ಅರಳನ್ನು ಪುಡಿ ಮಾಡಿ ..ಬೆಲ್ಲದ ಪಾಕಕ್ಕೆ ಹಾಕಿ ಉಂಡೆ ಕಟ್ಟಿದರೆ ಅದುವೇ "ಸುಕ್ರುಂಡೆ "
ಅಯ್ಯೋ..ಅದರಲ್ಲೇನಿದೆ ವಿಶೇಷ ? ಅಂತ ಅಂದು ಕೊಂಡಿರಿ ಅಲ್ಲವೇ..
ಆ ವಿಶೇಷ ಹೇಳ ಬೇಕಿದ್ದರೆ ನನ್ನ ಬಾಲ್ಯದ ದಿನಗಳ ನೆನಪಿನ ಬುತ್ತಿಎಂದಿನ ಹಾಗೆ ಬಿಚ್ಚಲೇ ಬೇಕು.ಹಂಚ ಬೇಕು
ಅಜ್ಜ,ಅಜ್ಜಿಯರ ಜೊತೆಯ ದೊಡ್ಡ ಕೂಡು ಕುಟುಂಬ.ಆಗ ಅಜ್ಜನ ತಂದೆ ,ತಾಯಿಯರ ಶ್ರಾದ್ಧ ಆಗುತ್ತಿತ್ತು.ಒಂದು ಶ್ರಾದ್ಧ ಬೇಸಿಗೆಯ ರಜೆಯಲ್ಲಿ ಆಗುತಿತ್ತು.
ಅಜ್ಜ,ಅಜ್ಜಿಯರ ಹತ್ತು ಮಕ್ಕಳ "ಮಕ್ಕಳೆಲ್ಲಾ ಆಗ ಜೊತೆಯಾಗುತ್ತಿದ್ದೆವು.ಹೋ...ಎಷ್ಟು ಜನ.ಎಷ್ಟು ಗದ್ದಲ.ಅಜ್ಜನ ಬೈಗುಳ..
ಆ ಶ್ರಾದ್ಧಕ್ಕೆ ಈ ಸುಕ್ರುಂಡೆ ಇರಲೇ ಬೇಕು..ಎರಡು ದಿವಸ ಮೊದಲು "ಅರಳನ್ನು ತಂದು ಅದರಿಂದ "ಭತ್ತ" ಹೆಕ್ಕುವ ಕೆಲಸ..(ಉಮಿ)
ದೊಡ್ಡ ಡಬ್ಬಗಳ ತುಂಬಾ ಚಕ್ಕುಲಿ ಮತ್ತು ವಡೆ.
ಅಷ್ಟು ಮೊಮ್ಮಕ್ಕಳಿರುವಾಗ ಎಷ್ಟು ಮಾಡಿದರೂ..ಕಡಿಮೆಯೇ.
ನಮ್ಮ ಮಕ್ಕಳ ಸೈನ್ಯದಲ್ಲಿ ಯಾರಿಗೂ ಈ " ಸುಕ್ರುಂಡೆ" ಇಷ್ಟವೇ ಇಲ್ಲ.ಹಸಿ,ಹಸಿ ..ಬರಿಯ ಸಿಹಿ.ಪರಿಮಳ ವಿಲ್ಲ...
ಶ್ರಾದ್ಧ ಕಳೆದ ಮೇಲೂ ನಾಲ್ಕು ದಿವಸಕ್ಕೆ ಬರುವಷ್ಟು ತಿಂಡಿಗಳನ್ನು ಮಾಡುತ್ತಿದ್ದರು.
ಸಂಜೆಯ ನಾಲ್ಕು ಗಂಟೆಯ ಕಾಫಿ ಹೊತ್ತಿಗೆ ಎಲ್ಲರಿಗೂ ಅದೇ ತಿಂಡಿ.
ಆಗ ಚಕ್ಕುಲಿ,ವಡೆ ಎಲ್ಲರಿಗೂ ಒಂದೊಂದೇ.ಈ ಸುಕ್ರುಂಡೆ ಮೂರು..ನಾಲ್ಕು ..ಮೊದಲೇ ಅದನ್ನು ಕಂಡ್ರೆ ಆಗೋದಿಲ್ಲ.ಅದು ಬೇಗ ಮುಗಿಯಲಿ. ..ಉಳಿದ ತಿಂಡಿಗಳು ತುಂಬಾ ದಿವಸಕ್ಕೆ ಬರಲಿ ಎಂಬುದು ಹಿರಿಯರ ಜಾಣತನ.
ನಾವು ಮಕ್ಕಳೆಲ್ಲಾ ಚಕ್ಕುಲಿ,ವಡೆ ತಿಂದು ಮುಗಿಸಿ ಈ ಸುಕ್ರುಂಡೆಯನ್ನು ಮಾತ್ರ ಕೈಲಿ ಹಿಡಿದುಕೊಂಡು ಹೊರಗೇ ಹೋವುತ್ತಿದ್ದೆವು!!
ಎಲ್ಲಿಗೆ ನಮ್ಮ ಪ್ರಯಾಣ ಗೊತ್ತೇ..
ಸೀದಾ ತೋಡಿನ ಕಡೆಗೆ..ಅಲ್ಲಿ ತೋಡಿಗೆ ಅಡ್ಡವಾಗಿ ಅಣೆಕಟ್ಟಿನ ಹಾಗೇ ಕಟ್ಟಿ ನೀರನ್ನು ಗದ್ದೆಗೆ ...ತೋಟಕ್ಕೆ ..ಬಟ್ಟೆ ತೊಳೆಯುವುದಕ್ಕೆ ಬಳಕೆ.
ನೀರಿನ ದೊಡ್ಡ ಗುಂಡಿ...ಧೋ..ಎಂದು ಜಲ ಧಾರೆ ಸುರಿವ ಸದ್ದು.ಅಲ್ಲಿಗೆ " ಕಟ್ಟದ ಗುಂಡಿ"ಎಂಬ ನಾಮ ಕರಣ.ಅಲ್ಲಿಯೋ ರಾಶಿ,ರಾಶಿ ಮೀನುಗಳು.
ಅಂಗೈಯಲ್ಲಿ ಅಡಗಿಸಿ ತಂದ ಈ ಇಷ್ಟವೇ ಇಲ್ಲದ ಸುಕ್ರುಂಡೆ ಆ ಮೀನುಗಳಿಗೆ.
ಸರದಿ ಪ್ರಕಾರ ಒಂದೊಂದೇ ಸುಕ್ರುಂಡೆ ಆ ನೀರ ಗುಂಡಿಗೆ ಎಸೆಯುತ್ತಿದ್ದೆವು.
ಒಬ್ಬನಿಗೆ ..ಆ ಕಡೆಗೆ ಹಿರಿಯರು ಯಾರಾದರೂ ಬರುತ್ತಿದ್ದಾರೆಯೇ? ಎಂದು ನೋಡಿ ಕೊಳ್ಳುವ ಕೆಲಸ..ಗೊತ್ತಾದರೆ ಒಂದೆರಡು ಕೆಮ್ಮು..ಸೂಚನೆಗೆ.
ಈಗ ಹಲವು ವರ್ಷಗಳು ಉರುಳಿ ಹೋಗಿವೆ.ಇಂದಿಗೂ ಆ ಸುಕ್ರುಂಡೆ ಇಷ್ಟವಿಲ್ಲ.ಯಾವುದಾದರೂ ಸಮಾರಂಭದಲ್ಲಿ ನಾವೆಲ್ಲ ಸೇರಿದಾಗ ಈ ವಿಷಯ ನೆನಪಿಸಿ ಕೊಂಡು ನಗುತ್ತೇವೆ.
ಸಣ್ಣದಾಗಿ ಬರೆಯಲು ಪ್ರಯತ್ನಿಸಿದ್ದರಿಂದ ಕೆಲವು ವಿಷಯಗಳನ್ನು ಹೇಳಲು ಮರೆತೇ.
ಸಾಧ್ಯವಾದರೆ ಇನ್ನೊಮ್ಮೆ ಹೇಳುವೆ.
ನಿಮಗೆ ಇಷ್ಟವಾಯಿತೋ..ಓದಲು ಕಷ್ಟವಾಯಿತೋ...

ಬಿ ಅರುಣಾ ಜಿ ಭಟ್
ಬದಿಕೋಡಿ
ಬದಿಕೋಡಿ
ಕಾಮೆಂಟ್ಗಳಿಲ್ಲ