ಮೇಘ ಮಾಯೆ
ಓ ಮೇಘವೇ ನೀ ಏಕೆ ಹೀಗೆ ಓಡುವೆ ?
ಈ ಪಾಪಿಯ ಹಾಗೆ ಸತಾಯಿಸುವೆ !
ಬಿಸಿಲೆದುರು ಕಣ್ಣಾ ಮುಚ್ಚಾಲೆ ಆಡುವೆ
ಶಾಖಕೆ ಹೊದಿಕೆಯಾಗಿ ನೆರಳಾಗುವೆ
ಈ ಪಾಪಿಯ ಹಾಗೆ ಸತಾಯಿಸುವೆ !
ಬಿಸಿಲೆದುರು ಕಣ್ಣಾ ಮುಚ್ಚಾಲೆ ಆಡುವೆ
ಶಾಖಕೆ ಹೊದಿಕೆಯಾಗಿ ನೆರಳಾಗುವೆ
ನಾಲ್ಕು ಹನಿ ಹನಿದು ಕಾಣೆಯಾದೆ
ನನ್ನಲಿ ಕೋಪವೇಕೆಂದು ವಿವರಿಸದೆ
ಬಳಿ ಬಂದು ಚೂರು ವಿಚಾರಿಸು
ನಗು-ನಗುತಾ ನಿಧಾನದಿ ಸಂಚರಿಸು !
ನನ್ನಲಿ ಕೋಪವೇಕೆಂದು ವಿವರಿಸದೆ
ಬಳಿ ಬಂದು ಚೂರು ವಿಚಾರಿಸು
ನಗು-ನಗುತಾ ನಿಧಾನದಿ ಸಂಚರಿಸು !
ಮಳೆಯಾಗಿ ಖುಷಿಯಾಗಿ ಸುರಿವೆಯಾ
ಈ ಜನರ ನೋಡಿ ದುಃಖದಿ ಕಣ್ಣೀರೆ !?
ಮಳೆ ಬಂದರೆ ಕೊಳಚೆ ಆಗುವ ಚಿಂತೆ
ಮಳೆ ಬರದಿರೆ ಸುಮ್ಮನೇ ಅಂತೆ - ಕಂತೆ !
ಈ ಜನರ ನೋಡಿ ದುಃಖದಿ ಕಣ್ಣೀರೆ !?
ಮಳೆ ಬಂದರೆ ಕೊಳಚೆ ಆಗುವ ಚಿಂತೆ
ಮಳೆ ಬರದಿರೆ ಸುಮ್ಮನೇ ಅಂತೆ - ಕಂತೆ !
ಈ ಜಗದ ಜನರು ಹುಡುಕುವರು ಕೊಂಕು
ಬಾಗಿದರೆ ಹೊಡೆವರು, ಮತ್ತೆ ಹೊಡೆವರು
ಎದುರಿಸು ತಿಳಿ ಹೇಳು, ಕೇಳದಿರೆ ನಡೆ
ಸಮಯ ಕಡಿಮೆಯಿದೆ ನಿನ್ನ ಗುರಿ ಸಾಧಿಸು....
ಬಾಗಿದರೆ ಹೊಡೆವರು, ಮತ್ತೆ ಹೊಡೆವರು
ಎದುರಿಸು ತಿಳಿ ಹೇಳು, ಕೇಳದಿರೆ ನಡೆ
ಸಮಯ ಕಡಿಮೆಯಿದೆ ನಿನ್ನ ಗುರಿ ಸಾಧಿಸು....
ಸಚಿನ್ ಕೃಷ್ಣ ಭಟ್
ಬದಿಕೋಡಿ
ಬದಿಕೋಡಿ
ಕಾಮೆಂಟ್ಗಳಿಲ್ಲ