ಹೇಳೆಕ್ಕೂ ಹೇಳಿ ಕಂಡತ್ತು
" ಹೇಳೆಕ್ಕೂ ಹೇಳಿ ಕಂಡತ್ತು"
ಬಿ.ಅರುಣಾ.ಜಿ.ಭಟ್.ಬದಿಕೋಡಿ💐
ಸುಬ್ಬಣ್ಣ,ಶಾರದಕ್ಕ ದಂಪತಿಗೊ ಒಂದು ದೊಡ್ಡಾ ಮದುವಗೆ ಹೋಗಿತ್ತಿದ್ದವು.ಜೆನವೋ ಜೆನ.ಗಿಜಿ,ಗಿಜಿ...ವಾದ್ಯವೂ,ಜೆನರ ಮಾತು ಹೆರಾಂದ ವಾಹನ ಶಬ್ಧ.. ಯಬೋ ದೇವರೇ.
ಕರೇಲಿ ಒಳುದ ಕುರ್ಚಿಲಿ ಇಬ್ರುದೇ ಕೂದುಗೊಂಡಿತ್ತಿದ್ದವು.ಏನು ಭಾವ,ಏನಣ್ಣಾ..ಏನತ್ತಿಗೆ,ಏನತ್ತೆ...ಯಬ್ಬಬ್ಬ..
ಎಲ್ಲೋರ ಮೋರೆಲಿ ನೆಗೆ.ಮೊಬೈಲ್ ಸೆಲ್ಫಿಗೊ ಅಲ್ಲಲ್ಲಿ.ಆ ಶಬ್ದದ ನಡುವಿಲಿಯೂ ಮೊಬೈಲಿಲಿ ಮಾತಾನಾಡುವವುದೇ..ಹೋ..
ನಮಸ್ಕಾರ ಸುಬ್ಬಣ್ಣ...ಹೇಳುದು ಕೇಳುವಾಗ ಹಿಂದಂಗೆ ತಿರುಗಿದ ಸುಬ್ಬಣ್ಣ."ಹೋ..ಎಂತಾಡ,ಮೂರು ವರ್ಷಾತು ನಾವು ಕಂಡು"ಹೇಳಿ ಸುಬ್ಬಣ್ಣ ಗೆಣಪ್ಪಣ್ಣನ ಹತ್ರೆ ಹೇಳಿದ.ಒಂದೊಂದೇ ಸುದ್ದಿ ಮಾತಾಡಿಯಾತು.ಗೆಣಪ್ಪಣ್ಣ ಸುಬ್ಬಣ್ಣನ ಮಕ್ಕಳ ಸುದ್ದಿಯೂ ಕೇಳಿದ.
ಅಷ್ಟಪ್ಪಗ ಸುಬ್ಬಣ್ಣನೂ ಕೇಳಿದ".ನಿಂಗಳ ಮಗಳಿಂಗೆ ಮದುವೆ ಆತಾಯಿಕ್ಕು" ಆಯಿದು.ಎರಡು ವರ್ಷಾತು.ಮಗಳು,ಅಳಿಯ ಅಮೆರಿಕಲ್ಲಿ ಈಗ.ಹೋದ ಮತ್ತೆ ಬೈಂದವಿಲ್ಲೆ.ಸಮ್ಮಾನಂಗೊ ಪೂರಾ ಬಾಕಿ.ಬತ್ತೆ ಆನು.ಎನ್ನ ಭಾವ ಬಂದಿಕ್ಕು.ಎಲ್ಲಿದ್ದ ಹೇಳಿ ನೋಡುತ್ತೆ" ಹೇಳಿಕ್ಕಿ ಗೆಣಪ್ಪಣ್ಣ ಹೋದ.
ಸುಬ್ಬಣ್ಣ ದಂಪತಿಗೊ ಮೋರೆ,ಮೋರೆ ನೋಡಿಗೊಂಡವು.ಸಣ್ಣ ನೆಗೆಯೂ ಬಂತು.
ಸಂಗತಿ ಎಂತಾ ಗೊಂತಿದ್ದೋ.ಮೂರು ವರ್ಷದ ಮೊದಲು ಸುಬ್ಬಣ್ಣ ಮಗಂಗೆ ಮದುವೆ ಮಾಡುಲೆ ಕೂಸು ಹುಡುಕ್ಕುತ್ತ ಇಪ್ಪಗ ಈ ಗೆಣಪ್ಪಣ್ಣನ ಮಗಳ ಕೇಳಿತ್ತಿದ್ದ.ಅವರ ಮನಗೂ ಹೋಗಿತ್ತಿದ್ದ.
ವಿಷಯ ಮಾತಾಡಿಯಪ್ಪದೆ ಗಣಪ್ಪಣ್ಣ ಹೇಳಿದ್ದು ಒಂದೇ ಮಾತು."ನಿಂಗಳ ಮಗ ಅಮೆರಿಕಲ್ಲಿಪ್ಪದನ್ನೇ.ಈ ವರ್ಷ ಬತ್ತ,ಮತ್ತೆ ನಮ್ಮ ದೇಶಲ್ಲೇ ಇಪ್ಪದು ಹೇಳಿ ನಿಂಗೊ ಹೇಳುತ್ತಿ.ಹೇಂಗೆ ನಂಬುದು.ಹಾಂಗಾಗಿ ಆನು ಎನ್ನ ಮಗಳ ಅಮೆರಿಕಾದ ಹೊಡೆoಗೆ ತಲೆ ಹಾಕಿ ಮನುಗುವ ಮಾಣಿಗೂ ಮಗಳ ಕೊಡ್ತಿಲ್ಲೇ"
ರಜ್ಜ ಬೇಜಾರ ಆದರೂ ತೋರುಸಿಗೊಳದ್ದೇ ಮನಗೆ ಬಂದಿತ್ತಿದ್ದ.ಅದೇ ವ್ಯಕ್ತಿಯ ಮಗಳು ಇಂದು ಮದುವೆ ಆಗಿ ಅಮೆರಿಕಲ್ಲಿದ್ದು ಹೇಳಿರೆ ನಂಬುಲೆಡಿಗ.ಸುಬ್ಬಣ್ಣನ ಮಗನ ಮದುವೆ ಆಗಿ ಅವ ಬೆಂಗಳೂರಿಲಿ ಬಂದು ಮನೆ ಮಾಡಿಯೂ ಆಯಿದು.ಆ ವಿಷಯ ಅಲ್ಲಿರಲಿ
ಎಲುಗು ಇಲ್ಲದ್ದ ನಾಲಗೆ ಹೇಳುದು ಇದಕ್ಕಿದ.ಯಾವುದೇ ಯೋಚನೆ ಮಾಡದ್ದೇ ದುಡುಕಿ ಮಾತಾಡುದು.ನಾಳೆಯು ದಿನ ಹೇಂಗೆ,ಎಂತಾಳಿ ನವಗೆ ಗೊಂತಿಲ್ಲೆ.ಪರಿಸ್ಥಿತಿ ಹೆಂಗಿಕ್ಕೂ ಹೇಳುವ ಕಲ್ಪನೆಯೂ ಇರ್ತಿಲ್ಲೆ.
ಮಾತಿಲಿ ಸೌಜನ್ಯ ಇದ್ದರೆ ಚೆಂದ.ಕೆಲವು ವಿಷಯದ ಕುರಿತು ಮಾತಾಡುವಗ ರಜ್ಜ ಮುಂದಾಲೋಚನೆ ಬೇಕು.
ಸುಬ್ಬಣ್ಣoಗೂ ಕೇಳುಲೇ ಅವಕಾಶ ಇತ್ತು.ಎಂತಾ ಮತ್ತೆ ಅಮೆರಿಕಲ್ಲಿಪ್ಪವಂಗೆ ಕೊಟ್ಟದು ಹೇಳಿ.ಆದರೆ ಸುಬ್ಬಣ್ಣ ಕೇಳ.ಕೇಳಿದರೆ ಎoತ ಪ್ರಯೋಜನ.ಅನಾವಶ್ಯಕ ಮಾತು ಎಂತಕೆ ಹೇಳುಗು.
ಹೀಂಗೇ ಇನ್ನೂ ಒಂದು ಸಂಗತಿ ಇದ್ದು.ಅದರ ಹೇಳುಲೆ ಬೇಗ ಬತ್ತೆ.☺💐
ಅರುಣಾ.ಜಿ.ಭಟ್.
ಕಾಮೆಂಟ್ಗಳಿಲ್ಲ