ಅಜ್ಜಿಯ ಉರುಟು ಬೊಟ್ಟು
"ಎನ್ನಜ್ಜಿಯ ಉರುಟು ಬೊಟ್ಟು"
ಅರುಣಾ.ಜಿ.ಭಟ್.💐
ಎನ್ನಜ್ಜನ ಮನೆ ಅಜ್ಜಿಯ ಹತ್ರೆ
ಇದ್ದತ್ತು ಒಂದು ಪುಟ್ಟು ಪೆಟ್ಟಿಗೆ
ಹೇನು ಬಾಚುಲೊಂದು ಹಣಿಗೆ
ತಲೆ ಬಾಚುಲೊಂದು ಹಣಿಗೆ..
ಮತ್ತೆರಡು ಬರೀ ಸಣ್ಣ,ಸಣ್ಣ ಕರಡಿಗೆ!
ಒಂದರೊಳ ಜೇನು ಮೇಣ
ಮತ್ತೊಂದರಲ್ಲಿ ಕುoಕುಮ.
ಬೆಟ್ರೀಯ ಮುಚ್ಚೆಲುದೆ ಒಂದಿಕ್ಕು ಒಟ್ಟಿಂಗೆ!
ಎನ್ನಜ್ಜಿ ತಲೆ ಬಾಚಿ ,ಬೊಟ್ಟು ಹಾಕುವ
ಕ್ರಮವೇ ಒಂದು ಚೆಂದಾ.
ಕಾಲುನೀಡಿ ಕೂದು,ಕೊಡಿ ಕಾಲುಗಳ
ನಡುವಿಲಿ ಕನ್ನಟಿ.
ಬೆಟ್ರಿಯ ಮುಚ್ಚೆಲಿನ ಹಣೆಯ ನಡುಕೆ ಮಡುಗಿ
ಉರುಟು ಜಾಗಗೆ ಜೇನು ಮೇಣ ಕಿಟ್ಟಿ
ಮತ್ತೆ ಕುಂಕುಮವ ಒಂದು ಬೆರಳಿಲಿ
ಅದರ ಮೇಲೆ ಚುಟ್ಟಿ ಕಿಟ್ಟಿದ ಹಾಂಗೇ ಮಾಡಿ
ಮೆಲ್ಲoಗೆ ಎರಡು ಬೆರಳಿಲಿ ಅಚ್ಚಿನ ತೆಗದರಾತು!
ಆಹಾಹಾ...ಎನ್ನಜ್ಜಿ ಬೊಟ್ಟು
ಹುಣ್ಣಮೆಯ ಚಂದಪ್ಪನ ಹಾಂಗೇ ಉರುಟುರುಟು!
ಎಲ್ಲಿಗೆ ಹೋವುತ್ತರೂ ಆ ಪುಟ್ಟು ಕರಡಿಗೆ
ರೆಡಿ.
ಆ ಚೆಂದದ ನೆನಪು ಮರದು ಹೋಗ ಬಿಡಿ.
ಬಿ.ಅರುಣಾ.ಜಿ.ಭಟ್.ಬದಿಕೋಡಿ.
ಕಾಮೆಂಟ್ಗಳಿಲ್ಲ