ಹೊಸ ಬರಹಗಳು

ಹೀಂಗೇ ಕುಶಾಲಿಂಗೇ

"ಹೀಂಗೇ ಕುಶಾಲಿಂಗೇ"ಬಿ.ಅರುಣಾ.ಜಿ.ಭಟ್.
ಯಬ್ಬಾ..ಎಂತಾ ಚಳಿ ದೇವರೇ.ಏಳುಲೇ ಮನಸಾವುತ್ತಿಲ್ಲೆ.ಏಳುಲೇ ತಡವು ಮಾಡಿರೆ ಕೆಲಸ ಆಯೆಕ್ಕನ್ನೇಪ್ಪ.ತಡವಾತೋಳಿ ಅಂಸರಲ್ಲಿ ಓಡಿ ಹೆಬ್ಬಟೆ ಬೆರಳಿಂಗೆ ಡಂಕಿದರೆ ...ಅಯ್ಯೋ..ಈ ಚಳಿಗೆ ಡಂಕಿದರೆ ಅಪ್ಪ ಬೇನೆಯೇ..😢😢😢
ಹೋಪಲೇ ಹತ್ತು ಹಲವು ಜೆಂಬಾರವುದೇ.ತೋಟದ ನೀರಾಯಣ,ಅಡಕ್ಕೆ ಹೆರ್ಕಾಣ,ಸೋಗೆ ಎಳೆಯಾಣ...ಹೋ..ಈ "ಯಾಣ"ಅಕ್ಷಯ.ಮುಗಿಯ ಹೇಳಿಗೊಂಡು "ಚಂಕಣ್ಣ"ಉದಿಯಪ್ಪಗಳೇ ಸುರುಮಾಡಿದ.
ಆನು ಮೊದಲು ಪಂಪ್ ಸ್ಟಾರ್ಟ್ ಮಾಡಿಕ್ಕಿ ಬತ್ತೆ ಆತೋ"ಹೇಳಿಕ್ಕಿ ಹೆರಟ.ಬಣ್ಣ ಯಾವುದು ಹೇಳಿ ಗೊಂತಾಗದ್ದ "ಬೈರಾಸಿನ"ಕೆಮಿ ಮುಚ್ಚಿ ಮುಂಡಾಸು ಬಿಗುಕ್ಕೊoಡು☺
"ಇದಾ..ನಿನ್ನೆ ಸರೀ ೯ ಘಂಟಗೆ ಕರೆಂಟ್ ಕಣ್ಣು ಮುಚ್ಚಿದ್ದು.ಅಂಬಗಳೇ ಕಣ್ಣುದೇ ಒಡದ್ದು"ಹೇಳಿತ್ತು ಹೆಂಡತಿ" ಚಂಕಿ".ಅದಪ್ಪು.ಎನಗೆ ನೆಂಪಿಲ್ಲೇ ಅದು.ಅಂಬಗ ೯ ಘoಟೆ ಕಳಿಯಲಿ ಹೇಳಿ ಕೂದ.ಕಳುದಪ್ಪಗ ಹೋದ.ಪಂಪ್ ಸ್ಟಾರ್ಟ್ ಮಾಡಿ ಮನೆ ಒಳ ಹೊಗ್ಗುಲಪ್ಪಗ ಕರೆಂಟ್ ಗೊಟಕ್..😢 "ಇದರ ಹಣೆ ಬರ.ಎಸ್ಟು ಅಂದಾಜಿ ಮಾಡಿದರೂ ಪ್ರಯೋಜನ ಇಲ್ಲೇ"ಹೇಳಿತ್ತು ಚಂಕಿ.
ಇನ್ನು ಹೊತ್ತೊಪಗಳೇ ನೀರು ಹಾಕುದು.ಅಡಕ್ಕೆ ಆದರೂ ಹೆರ್ಕುತ್ತೆ ಹೇಳಿಕ್ಕಿ ಪುನಃ ತೋಟಕ್ಕೆ ಚಂಕಣ್ಣ.
ಅದಾ..ಅಷ್ಟಪ್ಪಗ ನಾಯಿಗಳ ಗೌಜಿ ಸುರುವಾತು.ಜೀಪ್ ಬಂದು ನಿಂದತ್ತು ಜಾಲಿಲಿ.ಚಂಕಣ್ಣ...ಚಂಕಣ್ಣಾ ಹೇಳಿಗೊಂಡು ನಾಲ್ಕೈದು ಜೆನ ಬಂದವು.ಗುರ್ತದವೇ.
ಅವರ ಕೂಪಲೆ ಹೇಳಿಕ್ಕಿ ಚಂಕಿ ಗೆಂಡನ ದಿನುಗೋಳಿತ್ತು.ಅಂತೂ ಇಂತೂ ಮಾತು ಕಥೆ ,ಚಾಯ ಎಲ್ಲಾ ಆತೂ.ಎಂತದೋ "ವಂತಿಗಗೆ"ಬಂದದವು..ಒಂದು ಘಂಟೆ ಹಾಂಗೇ ಹೋತನ್ನೇ.ಅಡಕ್ಕೆ ಹೆರ್ಕುದು ಅರ್ಧಲ್ಲೇ.😢
ಹೊತ್ತೊಪಗ ೬ ಘಂಟಗೆ ತೋಟಕ್ಕೆ ನೀರು ಹಾಕುಲೆ ಪಂಪ್ ಸ್ಟಾರ್ಟ್ ಮಾಡಿದ ಚಂಕಣ್ಣ.ಸಂಕ ದಾಂಟೆಕ್ಕಾರೇ ಕರೆಂಟ್ ಚುಯಿಂಕ್."ನಿನ್ನನು ಬುಡಾಯೇ.ಏತ್ ಬೊಡಿಪ್ಪಾವಾ"ಹೇಳಿ ಸಂಕಲ್ಲಿ ಕೂದ.ರಜ್ಜ ಕಳುದು ಶೆಡ್ಡಿಂಗೆ ಹೋದ.ಅದಾ.ಕರೆಂಟ್ ಬೈಂದೂ."ಎನ್ನಡನಾ ನಿನ್ನ ಗೊಬ್ಬು"ಹೇಳಿದ.
ನೀರು ಹಾರಿಗೊಂಡು ಇತ್ತು.ಇರುಳು ಊಟ ಆತೂ."ಪಂಪ್ ನಿಲ್ಲುಸೆಡದೋ"ಹೇಳಿಗೊಂಡು ಚಂಕಣ್ಣ ಹೆರಟ.ಯಾವಾಗಲೂ ಇರುಳು ಆ ಹೊತ್ತಿಂಗೆ ಕರೆಂಟ್ ಹೋವುತ್ತು.ಈ ಚಳಿಗೆ ಉದ್ದಾಕೆ ಹೋಯೆಕ್ಕನ್ನೇ.ಇಂದುದೆ ಹೋವುತ್ತಾಳಿ ಇಬ್ರುದೇ ಕಾದವು.ಊ ಹುo..ಹೋಪ ಲಕ್ಷಣ ಇಲ್ಲೇ.ದೊಡ್ಡ ಲೈಟ್ ತೆಕ್ಕೊಂಡು ಹೋದವು ತೋಟಕ್ಕೆ.
ಪಂಪ್ ನಿಲ್ಸಿಕ್ಕಿ ಮನಗೆತ್ತಿಯಪ್ಪದೇ ಕರೆಂಟ್ ಹೋತು.ಶಿವನೇ...ಹೀಂಗೂ ಇದ್ದಾ.ಯಾವ ಜನ್ಮದ ವೈರಪ್ಪ ..ಈ ಕರೆಂಟಿಂಗೆ ಹೇಳಿ ಚಂಕಣ್ಣ,ಚಂಕಿ ಒಟ್ಟಿಂಗೆ ಹೇಳಿದವು.
ಈ ಅನುಭವ ಓದುವಾಗ ನೆಗೆ ಬಕ್ಕು.ಇದರ ಅನುಭವ ಇದ್ದವಕ್ಕೆ ಬೇಗ ಕಷ್ಟ ಅರ್ಥ ಅಕ್ಕು.
ಎನಗೆ ಕೆಲಸ ಸುಮಾರಿದ್ದು.ಕುಶಾಲು ಮಾತಾಡುಲೇ ಇನ್ನೊಂದರಿ ಬತ್ತೆ.💐💐💐
ಬಿ.ಅರುಣಾ ಜಿ.ಭಟ್.ಬದಿಕೋಡಿ.

ಕಾಮೆಂಟ್‌ಗಳಿಲ್ಲ