ಒಂದು ಸುಂದರ ಸಂಜೆಯಲಿ
ನಿನ್ನದೇ ನೆನಪಿನಲ್ಲಿ
ಅದೇನೋ ಗುಂಗಿನಲಿ
ಮೈಯ ಮರೆತಿದ್ದೆ ನಾನು
ಒಂದು ಸುoದರ ಸಂಜೆಯಲಿ
ತಂಪು ಗಾಳಿ ಬೀಸಿ ಬಂದು
ಕೆನ್ನೆಯನ್ನು ಸವರಿತು
ತಣ್ಣಗಿದೆ ಹೀಗೇಕೆ?
ಎಂದು ಮೆಲ್ಲನೆ ಉಸುರಿತು!
ಮರಿ ಹಕ್ಕಿ ಉಲಿಯುತ್ತಿತ್ತು
ಪುಟ್ಟದೊಂದು ಗೂಡಿನಲಿ
ಅಮ್ಮ ಬಂದ ಹರುಷದಲಿ
ಕಂಡು ಗುಟುಕು ಕೊಕ್ಕಿನಲಿ.
ಮುಗುಳು ನಗುವ ಬೀರುತ್ತಿತ್ತು
ಚೆಂಗುಲಾಬಿ ಗಿಡದಲ್ಲಿ
ಚಂದವಾಗಿ ಅರಳುವ ಆಸೆ
ತುಂಬಿಕೊಂಡು ಮನಸಿನಲ್ಲಿ
ಬಾನ ರವಿಯು ಸಾಗುತ್ತಿದ್ದ
ಪಡುವಣದ ಅಂಚಿನಲಿ
ನಾಳೆ ಬರುವೆನೆಂದು ಹೇಳಿ
ಭೂರಮೆಯ ಕಿವಿಯಲ್ಲಿ
ಕಣ್ಣುಗಳು ನೋಡುತ್ತಿದ್ದರೂ
ಮನಸು ನಿನ್ನ ನೆನಪಲಿತ್ತು
ನಿನ್ನೊಡನೆ ಕೂಡಿ ಬಾಳುವ
ಕನಸು ನನ್ನ ಕಾಡುತ್ತಿತ್ತು.
*ಬಿ.ಅರುಣಾ.ಜಿ.ಭಟ್*
*ಬದಿಕೋಡಿ*
ಕಾಮೆಂಟ್‌ಗಳಿಲ್ಲ