ಊರ ಬಿಟ್ಟ ಹಕ್ಕಿ
ಸಂಜೆ ಕಳೆದು ಕತ್ತಲು ಕವಿದಿದೆ
ಎತ್ತಲಿಂದಲೋ ಬಂದ ಸಣ್ಣ ಹಕ್ಕಿ
ಹಾರಿ ಬಂದು ತನ್ನ ಗೂಡು ಸೇರಿದೆ
ಅದೇಕೋ ಏನೋ ಏಕಾಂಗಿಯಾಗಿದೆ !
ನೆನಪಿಲ್ಲ ಹುರುಪಿಲ್ಲ ಮೌನವಾಗಿದೆ
ಹಗಲೆಲ್ಲಾ ಹಾರಿ ದಣಿವಾದಂತಿದೆ
ಬೆಳಗೆದ್ದು ಮತ್ತದೇ ಹಾಳೂರ ಸುತ್ತಾಟ
ಅದ ನೆನೆದು ಮನದೊಳಗೆ ಸಣ್ಣ ಕಿತ್ತಾಟ !
ತನ್ನವರ ಬಿಟ್ಟು ಬಂದೆ ಎಂಬ ದುಃಖವೊ!
ಇದು ತನ್ನ ಊರಲ್ಲ ಎನ್ನುವ ಕೊರಗೋ ?
ಮತ್ತೆ ಅದೇ ಊರ ಗೂಡ ಸೇರುವ ತವಕ
ಅಲ್ಲಿ ಅವಕಾಶವಿಲ್ಲದೆ ಬಂದಿದೆ ಇಲ್ಲಿ ತನಕ !
ಮುಂದೆ ಹೇಗೆ ಎನ್ನುವ ಆತಂಕ ಕಣ್ಣಲಿ
ಆದರೂ ಏನೋ ನಂಬಿಕೆ ಈ ಮಣ್ಣಲಿ
ನೆನಪು ಒಂದು ಅಂತೆ ನೆಪವಾಗದಿರಲಿ
ಹುರುಪು ಎಂದೆಂದೂ ಮನ ತುಂಬಿರಲಿ.
ಸಚಿನ್ ಕೃಷ್ಣ ಭಟ್
ಬದಿಕೋಡಿ
ಕಾಮೆಂಟ್‌ಗಳಿಲ್ಲ