ಹಣ್ಣೆಲೆ ಹಾಡು
ಮೈ ತುಂಬಾ ಹರಡಿದ್ದ
ಹಸಿರೆಲೆಗಳು..ಹಣ್ಣಾಗಿವೆ
ಒಂದೊಂದಾಗಿ ಕಳಚಿ
ಧರೆಗೆ ಉರುಳಿ..ಹೊರಳಿ
ಮರದಡಿಯಲಿ ಮಲಗಿವೆ.
ಬುವಿಯೊಳಗಡಗಿದ..
ನೀರಿನ ಸೆಲೆಯನರಸಿ
ಹೀರಿ,ಹೀರಿ ಜೀವ ಜಲವನುಣಿಸಿ
ಎಳೇಗಿಡವ ಬೆಳೆಸಿದ. .
ಬೇರುಗಳು . .ಬುವಿಯೊಳಗಿಂದ
ಹಣ್ಣೆಲೆಯೊಡನೆ ಪಿಸು ಮಾತನು
ಉಸುರುತಿವೆ..
ಕಾಣದೆ ಇದ್ದರೂ..ಒಳಗಿನ
ಭಾಂಧವ್ಯವ ನೆನೆದು ಕಂಬನಿ
ಮಿಡಿಯುತ್ತಿವೆ. .
ಬೀಸಿ ಬಂದ ತಂಗಾಳಿಯು
ಸೆಳೆದೊಯ್ಯುತಿದೆ ಹಣ್ಣೆಲೆಗಳನು
ಓಡುತ,ಓಡುತ ವಿದಾಯವ
ಹೇಳುತ್ತಿವೇ ಬೇರುಗಳಿಗೂ.
ರೆಂಬೆ ,ಕೊಂಬೆಗಳಿಗೂ.
ಬೋಳಾದ ಎತ್ತರದ ಆ ಮರಕೂ..
ಅರುಣಾ.ಜಿ.ಭಟ್.ಬದಿಕೋಡಿ.
ಕಾಮೆಂಟ್‌ಗಳಿಲ್ಲ