ಅನ್ನಪೂರ್ಣೆಯ ಗುಡಿ ಈ ಅಕ್ಕಿ ಮುಡಿ
ಕೆಲವು ದಿವಸಗಳ ಹಿಂದೆ ಈ "ಅಕ್ಕಿ ಮುಡಿ "ಫೇಸ್ ಬುಕ್,ವಾಟ್ಸ್ಅಪ್..ಗಳಲ್ಲಿ ಉರುಳಾಡುತಿತ್ತು..ಮನದೊಳಗಿನ ಬಾಲ್ಯದ ಸುಂದರ ನೆನಪುಗಳ ಮೂಟೆಯೊಂದು ಹೊರಳಿ,ಹೊರಳಿ ಮನದಂಗಳದಲಿ ನಿಲ್ಲಿಸಿತು ಅಕ್ಕಿಯಾಗುವ ತನಕದ ತಿಂಗಳುಗಟ್ಟಲೆಯ ಕಷ್ಟದ ಕೆಲಸಗಳ ದಿವಸಗಳೂ ಕಣ್ಣ ಮುಂದೆ ಬಂದಿತ್ತು.ಕೆಲಸದ ಗಡಿ,ಬಿಡಿಯಲ್ಲಿ ಗದ್ದೆಗೂ ,ಮನೆಗೂ ಓಡಾಡುವ ಅಪ್ಪ..ಎಂಟು,ಹತ್ತು ಜನ ಕೆಲಸ ಮಾಡಲು ಬಂದವರಿಗೆ ತಿಂಡಿ,ಊಟ ಮಾಡುವ ಧಾವಂತದ ಅಮ್ಮಾ.. ಓಹ್.
ಭತ್ತ ಕುಟ್ಟಿ,ಕುಟ್ಟಿ ಬಂದ ಅಕ್ಕಿಯನ್ನು ತುಂಬಿಸಿ ಇಡಲು ಆಗ ಪ್ಲಾಸ್ಟಿಕ್ ಚೀಲಗಳು ಇರಲಿಲ್ಲ.ಜೋಪಾನವಾಗಿ ಸಂಗ್ರಹಿಸಿ ಇಡಲು ಈ ಚಂದದ ಮುಡಿ..
ಅಕ್ಕಿ ಮಾಡಿಯಾದ ನಂತರ ಅಪ್ಪ ಮುಡಿ ತಯಾರಿಸುವ " ಸುಬ್ಬಣ್ಣು "ವ ಮನೆಗೆ ಸಂಜೆಯ ಹೊತ್ತಿಗೆ ಹೋಗುತ್ತಿದ್ದರು.
ಊರಿನಲ್ಲಿ ಮುಡಿ ಕಟ್ಟುವ ಕೆಲಸ ಅರಿತಿದ್ದ ಏಕೈಕ ವ್ಯಕ್ತಿ !! ಆತನ ಹೆಸರೇ " ಮುಡಿ ಗುದ್ದುವ ಸುಬ್ಬಣ್ಣು "
ಬೆಳಗ್ಗೆ ಬೇಗನೆ ಕೆಲಸಕ್ಕೆ ಬರುತ್ತಿದ್ದ..ಕೈಯಲ್ಲಿ ಬೈ ಹುಲ್ಲನ್ನು ಗುದ್ದಲು ಒಂದು ಸಲಕರಣೆ.!!
ಹಳೆಯ ಕಾಲದ ಪೌರಾಣಿಕ ಚಲನ ಚಿತ್ರಗಳಲ್ಲಿರುವ ಆಯುದವನ್ನು ಹೋಲುವಂತದ್ದು..
ಈ ಮುಡಿ ಕಟ್ಟುವಾಗ ತಾಳ್ಮೆ,ನಾಜೂಕು ಇರಲೇ ಬೇಕು.ಶಾಲೆಗೆ ರಜೆ ಇದ್ದ ದಿವಸ ನಾವು ಒಡ ಹುಟ್ಟಿದವರೆಲ್ಲಾ ಕುತೂಹಲದಿಂದ,ಆಶ್ಚರ್ಯದಿಂದ ಸುಬ್ಬಣ್ಣು ಮುಡಿ ಕಟ್ಟುವ ಕಾರ್ಯ ವೈಖರಿಯನ್ನು ಬೆರಗು ಕಂಗಳಿಂದ ನೋಡುತ್ತಾ ಕೂತಿರುತ್ತಿದ್ದೆವು.
ಆರಿಸಿದ ಬೈಹುಲ್ಲನ್ನು ವೃತ್ತಾಕಾರವಾಗಿ ಹರಡಿ . .ಅದರ ನಡುವೆ ನಿಂತು ಕೆಲಸ ಆರಂಭ.ಎಲ್ಲಾ ಸೇರಿಸಿ ಮೊಣಕಾಲಿಂದ ಮೇಲೆ ತಂದು ಹಿಡಿಯುತ್ತಿದ್ದ..
ಬೈಹುಲ್ಲಿನಲ್ಲಿ ಚಂದದ ಜಡೆ ಹೆಣೆಯುವಾಗ ನೋಡುವುದೇ ಚಂದಾ..
ಅಕ್ಕಿಯನ್ನು ಅಳೆದು ಅದರೊಳಗೆ ತುಂಬಿಸಿ ಅಟ್ಟದಲ್ಲಿಡುವ ಚಂದ ನೋಡಬೇಕು..ಆಹಾ.
ವರ್ಷವಿಡೀ ಬರುವಷ್ಟು ಅಕ್ಕಿ! ಮುಡಿಯೊಳಗೆ ತುಂಬಿಸುವಾಗ ಅಕ್ಕಿ ಹಾಳಾಗದಂತೆ ಯಾವುದೇ ರಾಸಾಯನಿಕ ಬೆರಸುವುದೇ ಇಲ್ಲ.ಹಾಗಾಗಿ ತುಂಬಾ ಸಮಯ ಕಳೆದಾಗ ಕೆಲವೊಮ್ಮೆ ಅಕ್ಕಿಯಲ್ಲಿ " ಗುಗ್ಗುರು" ಎನ್ನುವ ನಾಮಧೇಯದ ಕಪ್ಪು ಬಣ್ಣದ ಜೀವಿಗಳು ಅಕ್ಕಿಯಲ್ಲಿ ಕಾಣಿಸುತ್ತಿದ್ದವು.ಇರುವೆಯಷ್ಟು ಪುಟ್ಟದು.
ಅಮ್ಮ ಎಷ್ಟು ಸಲ ತೊಳೆದರೂ ಒಂದೊಂದು ಗುಗ್ಗುರು ಅನ್ನದಲ್ಲಿ ಕಾಣಿಸುತಿತ್ತು..ಆದರೆ ಊಟ ಮಾಡುವಾಗ ಹೇಳುವಂತಿಲ್ಲ.
ಹಾಗಾಗಿ ತಂಗಿಯರ ಜೊತೆ ಕುಳಿತು ಊಟ ಮಾಡುವಾಗ "ಕಣ್ಣು ಸನ್ನೆ" ಯಲ್ಲೇ ಗುಗ್ಗುರು ಕಂಡರೆ ಹೇಳುತ್ತಿದ್ದೆವು..ಪಿಸು,ಪಿಸು ಮಾತು ...ನಗು ಕೇಳಿದಾಗ "ಅಪ್ಪ" ನಿಗೆ ಅರಿವಾಗುತ್ತಿತ್ತು...ಮಾತಾಡದೆ ಬಾಯಿ ಮುಚ್ಚಿಕೊಂಡು ಊಟ ಮಾಡ್ಲಿಕ್ಕೆ ಏನು ಕೊಡಬೇಕು ನಿಮಗಿನ್ನು? ಎಂದು ಗದರಿಸುತ್ತಿದ್ದರು..
ಅನ್ನ ದೇವರು.ಅನ್ನ ಪೂರ್ಣೆ.ಹಾಗಾಗಿ ಅನ್ನದಲ್ಲಿ ಹುಳವಿದೆ ಎಂದು ಹೇಳ ಬಾರದು..ಆ ಕಾರಣದಿಂದ ಅನ್ನ ಬಿಡಲೇ ಬಾರದು..ಬರುವ ವರ್ಷ ಭತ್ತ ಕಡಿಮೆ ಬೆಳೆ ಬಂದೀತು ...ಎಂದೆಲ್ಲ ಹಿರಿಯರು ಹೇಳಿದ ಮಾತುಗಳನ್ನು ತಪ್ಪದೇ ಪಾಲಿಸುತ್ತಿದ್ದೆವು.
ಅಕ್ಕಿ ಮುಡಿಗೆ ಏನಾದರೂ ಕೆಲಸ ಮಾಡುವಾಗ ಕಾಲು ಸ್ವಲ್ಪ ತಾಗಿದರೂ ಕೈಯಲ್ಲಿ ಮುಟ್ಟಿ ನಮಸ್ಕರಿಸುವುದು ಅಭ್ಯಾಸವಾಗಿತ್ತು..
ಆ ಅಕ್ಕಿಯ ಅನ್ನ,ಗಂಜಿ ಅದೆಷ್ಟು ರುಚಿ.ಪರಿಮಳ..ತುಪ್ಪ ಮತ್ತು ಉಪ್ಪಿನ ಕಾಯಿ ಸಾಕು...
ಈಗ ಒಂದು ತಿಂಗಳಿಗೆ ಬೇಕಾಗುವಷ್ಟು ಅಕ್ಕಿ ತಂದು ತುಂಬಿಸಿಡುವ ಪ್ಲಾಸ್ಟಿಕ್ ಬಕೆಟ್.ಡಬ್ಬಗಳಿಗೆ ಅಕ್ಕಿ ಮುಡಿಯ ಆ ಕಳೆಯಿಲ್ಲ..ಅಕ್ಕಿಯೂ ವಿಷದಂಶಗಳಲಿ
ಮುಳುಗಿ ಮಿಂದು ಆ ರುಚಿಯೂ ಇಲ್ಲ.
ಕೆಂಪು ಬಣ್ಣದ ಕುಚ್ಚಿಲಕ್ಕಿಯ ತೊಳೆದಾಗ ಬಣ್ಣ ಬದಲಾವಣೆ..!!!
ಒಟ್ಟಿನಲ್ಲಿ ಈ ಅಕ್ಕಿ ಮುಡಿ ಕಳೆದು ಹೋದ ಸುಂದರ ದಿವಸಗಳ ನೆಂಪಿನಂಗಳದಲಿ ಓಡಿಯಾಡಿಸಿದ್ದು ಸತ್ಯ..
ಅಕ್ಕಿ ಮುಡಿಯ ಕಥೆ ಕಣ್ಣಾರೆ ಕಂಡವರಿಗೆ ಹೆಚ್ಚು ಅರ್ಥವಾದೀತೇನೋ..
ಅರುಣಾ ಜಿ ಭಟ್
ಬದಿಕೋಡಿ

ಕಾಮೆಂಟ್ಗಳಿಲ್ಲ