ಹೊಸ ಬರಹಗಳು

ಹಪ್ಪಳದ ಸಪ್ಪಳ

ಉರುಟುರುಟು ಉದ್ದಿನ ಹಪ್ಪಳಾ..ಪ್ಲಾಸ್ಟಿಕ್ ಲಕೋಟೆಯೊಳಗೆ ಒಂದಷ್ಟುಹಸಿ ಹಪ್ಪಳಗಳು ಜೊತೆಯಾಗಿರುತ್ತವೆ...ಉಪ್ಪುಂಟೋ?ಉಪ್ಪಿನ ಕಲ್ಲುoಟೋ? ಎನ್ನುವಷ್ಟು ಕೂಡಾ ಮಾತಿಲ್ಲ.ಬರೀ ಮೌನ!!
ಇನ್ನು ಕಾದ ಎಣ್ಣೆಗೆ ಹಾಕಿದಾಗ ನೋಡ ಬೇಕು.ಇದ್ದುದರ ಎರಡು ಪಟ್ಟು ದೊಡ್ಡ.ನೋಡಲೂ ಬಲು ಮುದ್ದು.
ಈಗ ಜಾಗವೂ ತುಂಬಾ ಬೇಕು.ಜೊತೆಯಾಗಿಟ್ಟರೆ ಸಾಕು.ಅಬ್ಬಬ್ಬಾ.ಅದೇನು ಮಾತು.!?ಜಗಳವಾಡಿ ಬಿದ್ದು ಪುಡಿಯಾಗುವುದೂ ಇದೆ.ಕೈಯಲ್ಲಿ ಎತ್ತುವಾಗಲು ಮೆಲ್ಲಗೆ ಎತ್ತಬೇಕು..
  ಈ ಉದ್ದಿನ ಹಪ್ಪಳಕ್ಕೂ ಪುಟ್ಟು,ಪುಟಾಣಿ ಮಕ್ಕಳಿಗೂ ಬಲು ನಂಟು.ಸಮಾರಂಭಗಳಲ್ಲಿ ಅಡುಗೆ ಮಾಡುವಾಗ ಈ ಹಪ್ಪಳ ಕಾಯಿಸಲು ಎಣ್ಣೆ ಬಿಸಿಯಾದಗಲೇ ..ಸರಿಯಾಗಿ ಮಾತನಾಡಲು ಬಾರದ ಕಂದಮ್ಮಗಳಿಗೂ
ಗೊತ್ತಾಗಿ ಬಿಡುತ್ತದೆ.! ತೋರು ಬೆರಳನ್ನು ಪರಿಮಳ ಬರುವ ಕಡೆಗೆ ತೋರಿಸುತ್ತಾ ಬೇಕು,ಬೇಕು ಎನ್ನುವ ಭಾವ ವ್ಯಕ್ತ ಪಡಿಸುವಾಗ ಅಚ್ಚರಿಯೂ ಮೂಡುತ್ತದೆ.
ಕೈಗೆ ಹಪ್ಪಳ ತಂದು ಕೊಟ್ಟರೆ ಸಾಕು..ಆಹಾ ..ಕಣ್ಣರಳಿಸಿ ,ಹಪ್ಪಳದ ಹಾಗೆ ಮೊಗವನ್ನು ಅರಳಿಸಿಕೊಂಡು ,ಪುಟ್ಟ,ಪುಟ್ಟ ಹೆಜ್ಜೆಯಿಡುತಾ ನಡೆವ ಕಂದನ ಚಂದವ ನೋಡಲೂ ಕಂಗಳೆರ ಡು ಸಾಲದು.!!
ಎದುರಿನಲ್ಲಿರುವ ಹಾಲು ಹಳ್ಳಿನಲ್ಲಿ ಮೆಲ್ಲಗೆ ಕಚ್ಚಿದಾಗ "ಕುರುಕ್..ಕುರುಕ್" ಸದ್ದು ಬರುವಾಗ ಕಣ್ಣು ಮುಚ್ಚಿಕೊಂಡು ಮಿಂಚಿನಂತಾ ನಗು..
ಇನ್ನು ಊಟಕ್ಕೆ ಕುಳಿತು ಕೊಳ್ಳುವಾಗ ಕೆಲವು ಪುಟಾಣಿಗಳ ಕೈಗೆ ಹಪ್ಪಳ ಕೊಟ್ಟರೆ ಸಾಕು.ಸುಮ್ಮನೆ ತಿನ್ನುತ್ತಾ ಕುಳಿತು ಕೊಳ್ಳುತ್ತವೆ..ಇಲ್ಲವಾದರೆ ಅಮ್ಮನಿಗೆ ಊಟ ಮಾಡಲು ಬಿಡದ ಹಾಗೆ ಓಡುತಿರುತ್ತಾರೆ.
ದೊಡ್ಡವರಿಗೂ ಹಪ್ಪಳ ಇಷ್ಟವಾಗುತ್ತದೆ.ಊಟಕ್ಕೆ ಕುಳಿತಾಗ ಸಾರು ಬಡಿಸುವವರು ಬರುತ್ತಿದ್ದ ಹಾಗೆಯೇ...ಈ ಹಪ್ಪಳವನ್ನು ಪುಡಿ,ಪುಡಿ ಮಾಡುವಾಗಿನ ಸಪ್ಪಳ ವಿಶೇಷವಾಗಿರುತ್ತದೆ..
ಈ ಹಪ್ಪಳದ ಸುದ್ದಿ ಬರೆದಷ್ಟೂ ಮುಗಿಯುವುದೇ ಇಲ್ಲ..
ತುಂಬಾ ಬರೆದರೆ ಮೆತ್ತಗಾದ ಹಪ್ಪಳದಂತೆ ಆಗ ಬಹುದೇನೋ..
ಬಿ.ಅರುಣಾ.ಜಿ.ಭಟ್
ಚಿತ್ರ ಕೃಪೆ: ಫೇಸ್ಬುಕ್

ಕಾಮೆಂಟ್‌ಗಳಿಲ್ಲ