ಹೊಸ ಬರಹಗಳು

ಕಂದನಿಗೆ...

ನಮ್ಮ ಒಲವಿನ ಬಳ್ಳಿಯಲಿ
ಹೂವೊಂದು ಅರಳಿದೆ..
ಒಮ್ಮೆ ಅಳುತ್ತಾ..ಮತ್ತೆ ನಗುತಾ
ಮಡಿಲಿನಲ್ಲಿ ಮಲಗಿದೆ..
ಕಂದನೆ ನಿನ್ನ ಕಂಗಳ ಬೆಳಕಿಗೇ
ಮನೆಯ ಕತ್ತಲು ಓಡಿದೆ..
ಹಿಗ್ಗಿನ ಜೊತೆಗೇ ಹಿರಿತನ ತಂದೇ
ನಿನ್ನಿಂದ ಹೊಸ ಲೋಕ ನೋಡಿದೆ..
ಗೆಜ್ಜೆ ಕಾಲ್ಗಳ ಹೆಜ್ಜೆಯ ಸದ್ದಿಗೆ
ಮರಿ ಗುಬ್ಬಿಯು ನಾಚುತಿದೆ
ನಿನ್ನಯ ಮುದ್ದು ಮಾತನು ಕೇಳಿ
ಗಿಣಿಗಳ ಗುಂಪು ಇಣುಕುತಿದೆ
ಜೀವ ತಳೆದ ಆ ದೇವರೇ ನೀನು
ನಮಗೆ ಇನ್ನೇನು ಬೇಕು.
ಜೀವನವೆಲ್ಲ ನಿನ್ನಯ ಜೊತೆಗೆ
ಹರುಷದಿ ಕಳೆದರೆ ಸಾಕು.
        ಅರುಣಾ.ಜಿ.ಭಟ್

ಕಾಮೆಂಟ್‌ಗಳಿಲ್ಲ