ಹೂ ಗಿಡ ಮತ್ತು ಮಡದಿ...
ಅನಾರೋಗ್ಯದಿಂದ
ಆಸ್ಪತ್ರೆ ವಾಸಕೆ ಹೊರಟವಳು
ಗುಲಾಬಿ ಗಿಡದ ಗೆಲ್ಲೊಂದ ನೆಟ್ಟಳು...
ಇದು ಚಿಗುರಿದರೆ ನಾನುಳಿವೆ..
ಒಣಗಿದರೆ ನಾನಳಿವೆ..?!ಎಂದಳು.
ಸಾವು,ಬದುಕಿನ ಜೊತೆಯ
ಹೋರಾಟದಲ್ಲಿ ..
ಸಾವನ್ನು ಸೋಲಿಸಿ...
ಬದುಕಿ ಮನೆಗೆ ಬಂದಳು...
ದಿನದ ಎರಡು ಹೊತ್ತೂ
ಹೂಗಿಡಗಳ ವ್ಯಾಮೋಹವಿರದ
ಪತಿಯು ಹೂಗಿಡಕೆ ನೀರು ಹಾಕುವುದಕಂಡು ಅಚ್ಚರಿಯ ಕಡಲಲಿ ತೇಲಿದಳು.
ತಕ್ಷಣ ತಾನು ನೆಟ್ಟ ಗುಲಾಬಿಯ
ಗೆಲ್ಲು ನೆನಪಾಗಿ...
ಮೆಲ್ಲನೆ ಕಿಟಿಕಿಯಿಂದ
ಇಣುಕಿ ನೋಡಿದಳು!
ನೆಟ್ಟ ಗೆಲ್ಲಿನಲಿ ಪುಟ್ಟ ಪುಟ್ಟ
ಚಿಗುರೆಲೆಗಳು ನಗುತ್ತಿದ್ದವು...
ಕಿಟಿಕಿಯಲ್ಲಿ ಇಣುಕಿದವಳ
ಕಂಡು ಆತ ನುಡಿದ..
ದಿನವೂ ನೀರೆರೆದೆ .
ಗೆಲ್ಲು ಚಿಗುರಿದೆ.
ಹೋಗುವ ಮುನ್ನ
ಏನೇನೋ ಹೇಳಿ ಭಯ ಪಡಿಸಿದೆ.
ಕೇಳಿಸಿ ಕೊಂಡ ಆಕೆಯ
ಕಂಗಳಲ್ಲಿ ನೀರು.. !
ಮೊಗದಲ್ಲಿ ನಗು..
ಹೂ ಗಿಡವೂ,ಮಡದಿಯು
ನಗುತಿರಲು ...
ಪತಿರಾಯನ ಮೈ ಮನದಲಿ ಹಿಗ್ಗು..
ಅರುಣಾ.ಜಿ.ಭಟ್
ಆಸ್ಪತ್ರೆ ವಾಸಕೆ ಹೊರಟವಳು
ಗುಲಾಬಿ ಗಿಡದ ಗೆಲ್ಲೊಂದ ನೆಟ್ಟಳು...
ಇದು ಚಿಗುರಿದರೆ ನಾನುಳಿವೆ..
ಒಣಗಿದರೆ ನಾನಳಿವೆ..?!ಎಂದಳು.
ಸಾವು,ಬದುಕಿನ ಜೊತೆಯ
ಹೋರಾಟದಲ್ಲಿ ..
ಸಾವನ್ನು ಸೋಲಿಸಿ...
ಬದುಕಿ ಮನೆಗೆ ಬಂದಳು...
ದಿನದ ಎರಡು ಹೊತ್ತೂ
ಹೂಗಿಡಗಳ ವ್ಯಾಮೋಹವಿರದ
ಪತಿಯು ಹೂಗಿಡಕೆ ನೀರು ಹಾಕುವುದಕಂಡು ಅಚ್ಚರಿಯ ಕಡಲಲಿ ತೇಲಿದಳು.
ತಕ್ಷಣ ತಾನು ನೆಟ್ಟ ಗುಲಾಬಿಯ
ಗೆಲ್ಲು ನೆನಪಾಗಿ...
ಮೆಲ್ಲನೆ ಕಿಟಿಕಿಯಿಂದ
ಇಣುಕಿ ನೋಡಿದಳು!
ನೆಟ್ಟ ಗೆಲ್ಲಿನಲಿ ಪುಟ್ಟ ಪುಟ್ಟ
ಚಿಗುರೆಲೆಗಳು ನಗುತ್ತಿದ್ದವು...
ಕಿಟಿಕಿಯಲ್ಲಿ ಇಣುಕಿದವಳ
ಕಂಡು ಆತ ನುಡಿದ..
ದಿನವೂ ನೀರೆರೆದೆ .
ಗೆಲ್ಲು ಚಿಗುರಿದೆ.
ಹೋಗುವ ಮುನ್ನ
ಏನೇನೋ ಹೇಳಿ ಭಯ ಪಡಿಸಿದೆ.
ಕೇಳಿಸಿ ಕೊಂಡ ಆಕೆಯ
ಕಂಗಳಲ್ಲಿ ನೀರು.. !
ಮೊಗದಲ್ಲಿ ನಗು..
ಹೂ ಗಿಡವೂ,ಮಡದಿಯು
ನಗುತಿರಲು ...
ಪತಿರಾಯನ ಮೈ ಮನದಲಿ ಹಿಗ್ಗು..
ಅರುಣಾ.ಜಿ.ಭಟ್
ಕಾಮೆಂಟ್ಗಳಿಲ್ಲ