ಹಳೆ ಹಾದಿಯತ್ತ ಚಿತ್ತ
ಹೊಸತನಕೆ ಹಂಬಲಿಸಿ ಹೊಸದರಲ್ಲೂ ಹೊಸದಿರಬೇಕೆಂದು ಹಪ ಹಪಿಸಿ ..ಓಡಾಡಿ,ಒದ್ದಾಡಿ ಸಾಕಾಯಿತೆ ಈ ಮಾನವನಿಗೆ..?! ಹೊಸದು ಬೇಕೆಂಬ ಹೋರಾಟದಲಿ ಸೋತು ,ಶರಣಾದನೆ ? ಮೆಚ್ಚಲಾರಂಭಿಸಿದರೆ ಮತ್ತೆ ಅಂದಿನ ಹಳೆ ತನವ..! ಮಣ್ಣ ಗೋಡೆಯ,ಮುಳಿ,ಸೋಗೆಯ ಹೊದಿಸಿದ..ಮಾಡಿನ ಮನೆಗಳ ನೋಡಿ..ಮೂಗು ಮುರಿದರು.. ಮೂದಲಿಸಿದರು.. ಇಂತ ಮನೆಯಲಿ ಬಾಳುವುದು ಸಣ್ಣ ತನವೆಂದು..ಕಿತ್ತೆಸದರು. ತಾರಸಿಯ ಮಹಡಿ ಮನೆಗಳು ಮೀಸೆ ತಿರುವುತ ನಿಂತವು ಎತ್ತರದಲ್ಲಿ. ಹಿಗ್ಗಿದರು ಬಲು ಹರುಷದಲಿ ಹೊಸತೆಂಬ ಅಮಲಿನಲ್ಲಿ.. ಹಳೆಯ ಕಾಲದ ವಸ್ತುಗಳನ್ನೆಲ್ಲಾ ಮಾರಾಟ ಮಾಡಿ.. ಹೊಸ ಮಾದರಿಯ ವಸ್ತುಗಳ ತಂದು ಅಲoಕರಿಸಿದರು ನೋಡಿ.. ಕಾಲ ಉರುಳಿತು..ಮಾನವ ದುರಾಸೆಯಿಂದ..ಹಾಳುಗೆಡವಿದ ಪ್ರಕೃತಿಯ ... ಪರಿಸರವದು ಮಲಿನ.. ತಪ್ಪಿ ಹೋಯಿತು ಬಿಸಿಲು,ಮಳೆ,ಚಳಿ ಗಳ ತಾಳ,ಮೇಳ.! ತಾರಸಿಯ ಮನೆಯೊಳಗೆ ಬಿಸಿಯೇರಿ..ಬೆವರಿ ಬಳಲಿ ಹುಡುಕುತಿಹನು.. ತಂಪಾಗಿಸುವ ಕ್ರಮವನ್ನು.. ಹಳೆಯ ಕಾಲದ ಮನೆ ಹಳೆಯ ವಸ್ತುಗಳನ್ನು ಕಂಡಾಗ ...ಸಂಭ್ರಮಿವ ಮಂದಿ ಹೆಚ್ಚಾಗುತಿಹರೆ..!? ಅದನ್ನು ಉಳಿಸಿ ಕೊಂಡವರು ಹೆಮ್ಮೆ ಪಡುವ ಕಾಲ ಬಂತೇ?! ಸುತ್ತಿ,ಸುತ್ತಿ ಸುಳಿದು ಕೊನೆಗೂ ಹಿಂದಿನ ಅದೇ ಹಾದಿಯನ್ನು ಸೇರುವಂತಾ ದಿನಗಳು ಮತ್ತೆ ಬರ ಬಹುದೇನೋ.. ಪೃಕೃತಿಯೆದುರು ಈ ಮಾನವರು ಸೋಲಲೇ ಬೇಕು. ದೇವರೆಂದರಿತು ಪೂಜಿಸಲೇ ಬೇಕು..
ಅರುಣಾ.ಜಿ.ಭಟ್
ಕಾಮೆಂಟ್‌ಗಳಿಲ್ಲ