ಹೊಸ ಬರಹಗಳು

ಕಾಪಾಡಮ್ಮ ಕಟೀಲೇಶ್ವರಿ

*ಕಾಪಾಡಮ್ಮಕಟಿಲೇಶ್ವರಿ*

ಕರವ ಜೋಡಿಸಿ
ಶಿರವ ಬಾಗಿಸಿ
ಪಾದ ಕಮಲಕೇ
ನಮಿಪೆವು
ನೋವನೆಲ್ಲ ದೂರಗೈದು
ಹರಸು ನಮ್ಮನು ಮಾತೆಯೇ

ಕೇಪಳದ ಹೂವುಗಳ
ಭಕ್ತಿಯಲಿ ತಂದಿಹೆವು
ದುಷ್ಟ ಶಕ್ತಿಗಳ ನಾಶಗೈದು
ಕರುಣೆಯಲಿ ಕಾಪಾಡು ತಾಯೇ
ನಿನ್ನನ್ನೇ ನಂಬಿಹೆವು.

ಜಲರಾಶಿ ನಡುವಿನಲಿ
ನೀನಿರುವೆ ಕಟೀಲಿನಲಿ
ಆ ಚೆಲುವನು ಹೇಗೆ ಬಣ್ಣಿಸಲಮ್ಮ
ಭಕ್ತರ ಕಾಯುವ ಭ್ರಮರಾಂಬೆಯೆ..
ರಕ್ಷಿಸೆಮ್ಮನು ಮಹಾಶಕ್ತಿಯೇ.

ಬದುಕಿನಲ್ಲಿ ಬಲು ನೊಂದು
ಕಟೀಲು ಕ್ಷೇತ್ರಕೆ ಬಂದು
ಭಕ್ತಿ ಭಾವದಲ್ಲಿ ಮಿಂದಾಗ
ಮೈಮನಕೆ ನವ ಶಕ್ತಿ ದುರ್ಗಾಂಬೆಯೆ
ನಿತ್ಯವೂ ಭಜಿಸುವೆವು ಜಗದಾಂಬೆಯೆ
                   *ಬಿ.ಅರುಣಾ.ಜಿ.ಭಟ್*
                        *ಬದಿಕೋಡಿ*











ಕಾಮೆಂಟ್‌ಗಳಿಲ್ಲ