ಹೂವಿನ ನೋವು
ನೀನು ನಾಳೆ ಮತ್ತೆ ಬರುವೆ
ಆದರೆ ನಿನ್ನನ್ನು ಸ್ವಾಗತಿಸಲು
ನಾನಿರಲಾರೆ! ಇಬ್ಬನಿಯಲ್ಲಿ
ಮಿಂದು ನಿನ್ನ ಬರುವಿಕೆಗೆ ಕಾಯುವ
ಆ ಮಧುರ ಕ್ಷಣಗಳು ಇನ್ನೆಲ್ಲಿದೆ ನನಗೆ?
ನನ್ನ ದಳಗಳೆಲ್ಲಾ... ಧರಾಶಾಯಿಯಾಗುತ್ತಿವೆ...
ಗಾಳಿ ಬೀಸಿ ಬಂದರೆ ಅವೆಲ್ಲವೂ ದಿಕ್ಕಾಪಾಲು!
ನಾನಿದ್ದುದಕ್ಕೆ ಸಾಕ್ಷಿಯೇ ಇಲ್ಲದಂತಾಗುವುದಲ್ಲಾ?!
ಅದೋ... ನನ್ನ ಒಡಹುಟ್ಟಿದವಳು ನಾಳೆ ನೀ
ಬರುವ ಸಮಯಕ್ಕೆ ಅರಳಿ ನಗಲು ಸಿದ್ಧವಾಗುತ್ತಿದ್ದಾಳೆ
ಇದೋ... ನನ್ನ ಶುಭವಿದಾಯ... ಎಂದು ಹೇಳುತ್ತಾ...
ನೇಸರ ಮುಳುಗಿದನೆಂದು ಮುಸು ಮುಸು ಅಳುತ್ತಾ...
ಬಲು ಬೇಸರದಲ್ಲಿತ್ತು ಮುದ್ದಾದ ಚೆಂಗುಲಾಬಿ!!!
- ಅರುಣಾ
ಕಾಮೆಂಟ್‌ಗಳಿಲ್ಲ