ಮಾಮರದ ಕಥೆ-ವ್ಯಥೆ
ವಿಶಾಲವಾಗಿ ಹರಡಿದ್ದ ಬೃಹದಾಕಾರದ ಮಾಮರ
ಮರದ ಕೊಂಬೆಯಲ್ಲಿ ಕುಳಿತಿದ್ದ ಜೋಡಿ ಹಕ್ಕಿಗಳೆರಡು
"ಟುವ್ವೀ... ಟುವ್ವೀ... " ಎಂದು ರಾಗವಾಗಿ ಉಲಿಯುತ್ತಾ
ಸರಸ-ಸಲ್ಲಾಪದಲ್ಲಿ ಮಗ್ನವಾಗಿದ್ದವು
"ಹೂಂ... ನೀವಿನ್ನು ನನ್ನ ಮೈಯ ಮೂಲೆಯಲ್ಲೆಲ್ಲಾದರೂ
ಗೂಡು ಕಟ್ಟಬೇಕು, ನಂತರ ಮೊಟ್ಟೆಗಳು-ಮರಿಗಳು,
ಅವುಗಳನ್ನು ತಿನ್ನಲು ಬರುವ ಹಾವುಗಳು...
ಇಂತದ್ದನ್ನೆಲ್ಲಾ ನಾನು ನೋಡಿದ್ದಕ್ಕೆ ಲೆಕ್ಕವೇ ಇಲ್ವಲ್ಲಾ!
ಇನ್ನು ಎಷ್ಟೆಲ್ಲಾ ನೋಡಲಿರುವೆನೋ... " ಎಂದುಕೊಂಡು
ಮಾಮರ ಕುಲು-ಕುಲುನೆ ನಕ್ಕಿತು. ಕುಲುಕಾಟಕ್ಕೆ
ಒಂದಷ್ಟು ಎಲೆಗಳು ನೆಲಕ್ಕೆ ಬಿದ್ದವು!
ಮಾಮರದ ಬುಡದಲ್ಲಿ ಬೃಹದಾಕಾರದ ಮರಗಳನ್ನು
ಕೆಲವೇ ಕ್ಷಣಗಳಲ್ಲಿ ಧರೆಗುರುಳಿಸಬಲ್ಲ 'ದೈತ್ಯ' ಶಕ್ತಿಯ
ಯಂತ್ರವನ್ನು ಹಿಡಿದುಕೊಂಡು ಮಾನವರಿಬ್ಬರು ನಿಂತಿದ್ದರು;
ತಮಗೆ ತೊಂದರೆಯಾಗದಂತೆ ಯಾವ ಕಡೆಗೆ ಮರವನ್ನು
ಉರುಳಿಸಬೇಕು ಅಂತ ಯೋಚಿಸುತ್ತಿದರು....
- ಅರುಣಾ
ಕಾಮೆಂಟ್‌ಗಳಿಲ್ಲ