ಮುನಿಸದಿರು ಗೆಳತಿ
ಬಯಸಿ ಏನೋ ತಂದಿರುವೆ ಗೆಳತಿ
ಮುನಿಸಿ ಏಕೆ ನಿಂದಿರುವೆ ನನ್ನೊಡತಿ
ಈಗ ಏನ ಮಾಡಲಿ ಹೇಳು ನನ್ನ ಸತಿ
ಕೋಪಿಸಿ ಕೆಂಪಾದರೂ, ಹೆಚ್ಚಿತು ಪ್ರೀತಿ !
ಒಳ ಬಂದರೂ ಏನೂ ಕೇಳಲಿಲ್ಲ ನೀನು
ದಣಿವಿಗೆ, ಏನಾದರೂ ಕೊಡುವೆಯೇನು
ಪರವಾಗಿಲ್ಲ ಬಿಡು, ನೀಡು ಒಂದು ಮುತ್ತು
ಹಾಯಾಗಿ ಮರೆವೆ ಈ ಸಂಜೆಯ ಹೊತ್ತು !
ಬಳಲಿದರೂ, ನಿನ್ನ ನೋಡಿ ಅದ ಮರೆವೆ
ಮನದೊಳಗೆ ನೆನೆ ನೆನೆದು ತುಸು ನಗುವೆ
ಮುನಿಸಿಗೆ ಅದೇಕೋ ನಗುವುದು ನನ್ನ ಕಣ್ಣು
ಓ ಅಂದ ಚಂದದ ಕೆಂಪು ಮೂಗಿನ ಹೆಣ್ಣು !
ಹತ್ತಿರ ಕರೆಯಲಿಲ್ಲ, ಬಿಗಿದಪ್ಪಲೇ ನಿನ್ನ
ಕೋಪ ಬಿಡು ನನ ಮುದ್ದು ಮುದ್ದು ಚಿನ್ನ
ಸುಮ್ಮನಿದ್ದರೆ ಬಂದು ಇಕ್ಕಳಿಸುವೆ ನಿನ್ನ
ನಗುನಗುತ ಕಳೆಯೋಣ ಈ ಸಂಜೆಯನ್ನ !
ಸಚಿನ್ ಭಟ್
ಕಾಮೆಂಟ್ಗಳಿಲ್ಲ