ಹೊಸ ಬರಹಗಳು

ಮುಗುಳ್ನಗೆ


ನಿನ್ನ ನೋಡಿದರೆ ಅದೇಕೋ
ಎದೆ ತುಂಬಿ ಬರುವುದು ಪ್ರೀತಿ
ಏಕೆ ಹೀಗಾಗುವುದು ಈ ರೀತಿ
ಓ ಅಂದ-ಚೆಂದದ ಮಾಯಗಾರ್ತಿ !
ಬೆಳಗಿನ ಒಂದು ಶುಭ ಸಂದೇಶ ಸಾಕು
ದಿನವಿಡೀ ಖುಷಿ ಖುಷಿಯಲಿ ಕಳೆಯಲು
ಮತ್ತದನೇ ನೂರು ಬಾರಿ ಓದುವೆನು
ನನ್ನೊಳಗೇ ಪರಿತಪಿಸಿ ಕಿರು ನಗುವೆನು !
ನಿನ್ನ ಚಿತ್ರದ ಪ್ರತಿ ದಿನದ ನಾ ನೋಡುಗ
ನಿನ್ನ ಮೌನದ ಮುಗುಳ್ನಗೆಯ ನಾ ಕೇಳುಗ
ಕಣ್ಣಂಚಿನ ಸಣ್ಣ ನೆರಿಗೆ ,ಆ ಕಪ್ಪುಕಾಡಿಗೆ
ಈ ಮನವನು ರೋಮಾಂಚನ ಗೊಳಿಸಿದೆ !
ಮಿಂಚು ಮಾತಿನ, ಚೂರು ತುಂಟತನ
ದೂರ ಸರಿಸಿತು ಎನ್ನ ಏಕಾಂತವನು
ನಿನ್ನ ಮುದ್ದು ಮೊಗದ ಚಂದದ ನೋಟ
ನನ್ನೆದೆಯಲಿ ಶುರುವಾಗಿದೆ ಪ್ರೀತಿಯ ಆಟ !
ನೀ ನನ್ನ ಬಳಿ ಇರಬೇಕೆಂಬ ಹಂಬಲ
ಆದರೂ ಏನೋ ನಯವಾದ ಗೊಂದಲ
ಸುಖ-ದುಃಖ ಹಂಚಿಕೊಳ್ಳಲೇನೋ ಆತುರ
ಬಾಳಪುಟದಲಿ ಆಗಲೇ ಒಂದೊಳ್ಳೆಯ ಅಕ್ಷರ ?
ಸಚಿನ್ ಕೃಷ್ಣ ಭಟ್
ಬದಿಕೋಡಿ

ಕಾಮೆಂಟ್‌ಗಳಿಲ್ಲ