ಮೌನ ಕವಿ
ನಾ ಹಾಗೆ ಸುಮ್ಮನೆ ಕುಳಿತಿರಲು
ನೀ ತಂಗಾಳಿಯಂತೆ ಬಂದು ಸೋಕುವೆ
ತರಗೆಲೆಯಂತೆ ಕಳೆದು ಹೋಗುವೆ
ಆದರೂ ನೆನಪಲಿ ಮಗದೊಮ್ಮೆ ಬರುವೆ !
ನೀ ತಂಗಾಳಿಯಂತೆ ಬಂದು ಸೋಕುವೆ
ತರಗೆಲೆಯಂತೆ ಕಳೆದು ಹೋಗುವೆ
ಆದರೂ ನೆನಪಲಿ ಮಗದೊಮ್ಮೆ ಬರುವೆ !
ಬೇಡವೆಂದರೂ ಮತ್ತೆ ಮತ್ತೆ ಏಕೆ ಬರುವೆ
ಎದ್ದರೂ ಬಿದ್ದರೂ ನೀ ನಗುತ ನಗಿಸುವೆ
ಬೇಕಿದ್ದಾಗ ಬರಲಿಲ್ಲ, ನಗುತ ನಗಿಸಲಿಲ್ಲ
ಕಾಲ ಕಳೆದಿದೆ ಇನ್ನು ಅತ್ತರೇನು ನಕ್ಕರೇನು !
ಎದ್ದರೂ ಬಿದ್ದರೂ ನೀ ನಗುತ ನಗಿಸುವೆ
ಬೇಕಿದ್ದಾಗ ಬರಲಿಲ್ಲ, ನಗುತ ನಗಿಸಲಿಲ್ಲ
ಕಾಲ ಕಳೆದಿದೆ ಇನ್ನು ಅತ್ತರೇನು ನಕ್ಕರೇನು !
ನೀನೊಂದು ಬಿಸಿಲ ಕುದುರೆಯಂತೆ
ನಾನಿನ್ನು ಆ ಬಿಸಿಲಿಗೆ ಬಳಲಿದಂತೆ
ಕಣ್ಣೆದುರು ಕುಣಿದು ನಲಿದು ಬರುವೆ
ನೋಡಿರೆ ನಾ ಖಾಲಿ ದಾರಿಯಲಿರುವೆ !
ನಾನಿನ್ನು ಆ ಬಿಸಿಲಿಗೆ ಬಳಲಿದಂತೆ
ಕಣ್ಣೆದುರು ಕುಣಿದು ನಲಿದು ಬರುವೆ
ನೋಡಿರೆ ನಾ ಖಾಲಿ ದಾರಿಯಲಿರುವೆ !
ನಾ ಮನಸಾರೆ ಪ್ರೀತಿಸಿದೆ ನಿನ್ನ
ಆಗ ಮನಸೂರೆ ಗೊಳಿಸಿದೆ ನನ್ನ
ನೀನೊಪ್ಪಲಿಲ್ಲ ನನ್ನ ಪ್ರೀತಿಯನ್ನ
ಇನ್ನೊಪ್ಪಿದರೂ ಕಾಲ ಕಳೆದಿದೆ ಚಿನ್ನ !
ಆಗ ಮನಸೂರೆ ಗೊಳಿಸಿದೆ ನನ್ನ
ನೀನೊಪ್ಪಲಿಲ್ಲ ನನ್ನ ಪ್ರೀತಿಯನ್ನ
ಇನ್ನೊಪ್ಪಿದರೂ ಕಾಲ ಕಳೆದಿದೆ ಚಿನ್ನ !
ಆ ತುಸು ಪ್ರೀತಿ ಬೇಡದಾಯಿತೇನು
ಇನ್ನು ತಪ್ಪಿದ ಮೇಲೆ ಒಪ್ಪಿದರೇನು ?
ಒಪ್ಪಿಗೆ ನೀಡಲು ನಾ ಯಾರು ಗೆಳತಿ ?
ಸುಮ್ಮನಿರುವುದೇ ನನಗೀಗಿರುವ ಮಿತಿ!
ಇನ್ನು ತಪ್ಪಿದ ಮೇಲೆ ಒಪ್ಪಿದರೇನು ?
ಒಪ್ಪಿಗೆ ನೀಡಲು ನಾ ಯಾರು ಗೆಳತಿ ?
ಸುಮ್ಮನಿರುವುದೇ ನನಗೀಗಿರುವ ಮಿತಿ!
ಮತ್ತೆ ನೀ ಸಿಗದಿರು ನನ್ನ ನೆನಪಲಿ
ನಾ ಹೊರಟಿರುವೆ ಹೊಸ ದಾರಿಯಲಿ
ಸಂಜೆಯು ಕಳೆದು ಕತ್ತಲು ಕವಿದಿದೆ
ನಾನವಳ ನೆನೆದು ಮೌನ ಕವಿಯಾದೆ !
ನಾ ಹೊರಟಿರುವೆ ಹೊಸ ದಾರಿಯಲಿ
ಸಂಜೆಯು ಕಳೆದು ಕತ್ತಲು ಕವಿದಿದೆ
ನಾನವಳ ನೆನೆದು ಮೌನ ಕವಿಯಾದೆ !
ಸಚಿನ್ ಕೃಷ್ಣ ಭಟ್
ಬದಿಕೋಡಿ
ಬದಿಕೋಡಿ
ಕಾಮೆಂಟ್ಗಳಿಲ್ಲ