ಸುಮಾರು ಸಮಯಾತು.ಈ ವಿಷಯವ ಹೇಳೆಕ್ಕೂ ಹೇಳಿ ಗ್ರೇಶುದು.ಯಾವುದಕ್ಕೂ "ಸಮಯ"ಕೂಡಿ ಬರೆಕ್ಕು.ಅಲ್ಲದೋ?
ಈಗ ಹೇಳುತ್ತೇ...😊
ಕೆಲವು ಜೆನ ಎನ್ನ ಬೈಗೂ ಹೇಳುದು ಒಳ ಮನಸಿಲಿದ್ದು.! ಬರದ್ದರ ಓದುದನ್ನೇ.ಎನ್ನ ಕಾಣ..👍
ಅಂದು ಮನೆ ತುಂಬಾ ಮಕ್ಕೊ.ಅವಕ್ಕೆಲ್ಲಾ ಅವರವರ ಕೆಲಸ ಮಾಡಿಗೊಂಬಲೆ ಬೇಗ ಕಲಿಶುಗೂ.3 ವರ್ಷ ಆಯೆಕ್ಕಾರೆ "ಚಕ್ಜನ ಕಾಲು ಕಟ್ಟಿ"ಕೂದು "ಪುಟ್ಟು ಕೈಲಿ"ಬಾಚಿ,ಬಾಚಿ ಉಂಗು.ಭಾಗವೂ ತಿಂಗೂ.ಅದಾಗ,ಇದಾಗ ಹೇಳುವ ಕಥೆಯೇ ಇಲ್ಲೇ..
ತೋಟoದ ಅಡಕ್ಕೆ ಹೆರ್ಕುಲೇ ಅಂಬಗ "ಕೌ oಗ ಕುರುವೆ"ಹೇಳಿತ್ತು.ಮಾದೆರಿ ಬಳ್ಳಿಯ ಕೈ ಇಪ್ಪ ಕುರುವೆ.( ಬ್ಯಾಗಿನ ಹಾoಗೆಪ್ಪ)
ಅದರ ಮೊಡದು ಕುರುವೆ ಮಾಡಿ ತಂದು ಕೊಡುವ ಜೆನದ ಹೆಸರು"ಬಟ್ಯ"
ಪುಟ್ಟು,ಪುಟ್ಟು ಮಕ್ಕಳೂ ಅಡಕ್ಕೆ ಹೆರ್ಕುಗು ಅಂಬಗ.ಅವಕ್ಕೆ ಹೇಳಿಯೇ ಪುಟ್ಟು,ಪುಟ್ಟು ಕೌಂಗ ಕುರುವೆಯೂ ಇಕ್ಕು👌
ಕೂಸುಗೊ ಹದಿನಾಲ್ಕು ವರ್ಷ ಆಯೆಕ್ಕಾರೆ ಅಡಿಗೆ ಕೆಲಸ ಕಲುತ್ತಾಗಿರ್ತು.ಒಲಗೆ ಕಿಚ್ಚು ಮಾಡುದು,ಕಲ್ಲಿಲಿ ಕಡವದು...!!! ಕರವದು..
ಹೀಂಗಾಗಿ ಮಕ್ಕೊಗೆ "ಆಲಸ್ಯ"ಇತ್ತಿಲ್ಲೆ.ಯಾವ ಕೆಲಸಕ್ಕೂ "ಸೈ" ...👍
ಈಗ ಹಾಂಗಲ್ಲ,ಅಲ್ಲಲೇ ಅಲ್ಲಪ್ಪಾ.
ಒಬ್ಬನೋ,ಇಬ್ರೊ ಮಕ್ಕೊಇಪ್ಪದು.ಅವರ ಬೆಳೆಶುವ ಕ್ರಮ ನೋಡಿ ಕೆಲವು ಸರ್ತಿ ಕೋಪ ಬತ್ತು.ಬೇಜಾರವೂ ಆವುತ್ತು."ಕೆಳ ಮಡುಗಿರೆ ಒರಳೆ ಬಕ್ಕು,ಮೇಲೆ ಮಡುಗಿರೆ ಕಾಕೆ ಕೊಂಡೋಕು"ಹೇಳುವ ಹಾಂಗೇ.😢
ಅಲ್ಲಿಪ್ಪ ವಸ್ತು ಇಲ್ಲಿ ಮಡುಗುಸವು.ಎಡಿಯಾ. ..ಕಷ್ಟಕ್ಕೂ ಹೇಳುದು ಅಮ್ಮ,ಅಪ್ಪ.!?
ವರ್ಷ ಹದಿನೆಂಟು ಕಳುದರುದೇ ಮಕ್ಕೊ ಕೂದಲ್ಲಿoಗೇ ಕುಡಿವಲೇ ನೀರು ತೆಕ್ಕೊಂಡೋಗಿ ಕೊಡುಗು!!! ಹದಿನಾಲ್ಕು ವರ್ಷಪ್ಪನ್ನಾರ ಅಶನ ಬೆರ್ಸಿ ಬಾಯಿಗೆ ಹಾಕುದು.ಹಲ್ಲು ತಿಕ್ಕುಲೇ ಬ್ರೆಶ್ ಗೆ ಪೇಸ್ಟ್ ಹಾಕಿ ಮಡುಗುವ ಅಮ್ಮಂದ್ರೂ ಇದ್ದವಪ್ಪ?! ಸ್ವಂತ ಯೋಚನಾ ಶಕ್ತಿ,ತನ್ನ ಕೆಲಸಂಗಳ ಮಾಡಿಗೊಂಬಲೆಡಿಯದ್ದೇ ..ಮಕ್ಕೊ ಒದ್ದಾಡುಲೇ ಮೂಲ ಕಾರಣವೇ ಇದು. ಇನ್ನು ಕೂಸುಗಳ ಅಡಿಗೆ ಕೋಣಗೆ ಬಪ್ಪಲೇ ಬಿಡವು.ಅದೆಲ್ಲಾ ಓಬಿ ರಾಯನ ಕಾಲಲ್ಲಿ.ಮಾಡರ್ನ್ ಆಗಿರೆಕ್ಕು..ಹೇಳಿ ಕೆಲವು ಅಮ್ಮಂದ್ರ ಉವಾಚ! ಈ ಇಂಗ್ಲೀಷ್ ಮೀಡಿಯಂ ಮಕ್ಕೊ ಆಗಿ...ಹವ್ಯಕ ಭಾಷೆಲಿ ಕೆಲವು ವಸ್ತುಗಳ ಹೆಸರು ಹೇಳುಲೆ ನರಕ್ಕ ಬಪ್ಪ ಕಥೆ ಕೇಳಿರೇ...ರಾಮ,ರಾಮಾ.
ಹಾಂಗಿದ್ದರೆ ಉಷಾರಿ ಹೇಳಿ ತಿಳ್ಕೊಂಡಿಪ್ಪಲು ಸಾಧ್ಯತೆ ಇದ್ಫು.
ಎಷ್ಟು ಕಲುತ್ತರೂ ಒಂದು ಮುಷ್ಟಿ ಬೇಶಿ ತಿಂಬಲೆ ಅರಡಿಯೆಕ್ಕನ್ನೇ.ಕೂಸು,ಮಾಣಿ ಹೇಳುವ ಬೇಧ ಇಲ್ಲದ್ದೇ ಕಲಿಯಲೇ ಬೇಕು ಈ ಅಡಿಗೆ ಕಲೆ.ಅರ್ಥ ಮಾಡಿಗೊಂಬೋರಿಲ್ಲೇ.
ಅದೆಲ್ಲಾ ಅಪ್ಪು.ಈ ಕಥೆ ಬರದಷ್ಟೂ ಮುಗಿತ್ತೇ ಇಲ್ಲೆನ್ನೇ.☺
ಇಂದಿoಗೆ ಇಷ್ಟು ಸಾಕು ಆತಾ.ಇದರ ಮುಂದುವರಿದ ಭಾಗ ಬೇಗ ಬರದು ಕಳುಸುತ್ತೆ.
ಇದರ ಪೋಸ್ಟ್ ಮಾಡಿ ರಜ್ಜ ಹೊತ್ತಿಲಿ ಎನಗೆ "ಅಕ್ಷಿ,ಅಕ್ಷೀ "ಬಂದರೆ ಇದರ ಓದಿಕ್ಕಿ ಎನ್ನ ಆರೋ ಬೈದ್ದವ ಹೇಳಿ ಲೆಕ್ಕ.ನಿಂಗೊಗೆ ಒಂದಾ ಶಬ್ಧ ಕೇಳುಗು.ಕೇಳದ್ರೆ ಹೇಳಿಕ್ಕಿ ಆತೋ.ಹೀಂಗೇ ಮಾತಾಡುವ ಇನ್ನೊoದರಿ👍💐💐💐💐💐
ಬಿ.ಅರುಣಾ.ಜಿ.ಭಟ್.ಬದಿಕೋಡಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ
(
Atom
)
ಕಾಮೆಂಟ್ಗಳಿಲ್ಲ